Published
10 months agoon
By
Akkare Newsಉಳ್ಳಾಲ ತಾಲೂಕು ಬಿಲ್ಲವ ಸಮಾವೇಶ ಬಿಲ್ಲವ ಸಮಾಜದ ಸಂಘಟನಾ ಶಕ್ತಿಗೆ ಮುನ್ನುಡಿ ಬರೆಯಲಿದೆ,ಒಗ್ಗಟ್ಟಿನ ಮೂಲಕ ಇತಿಹಾಸ ನಿರ್ಮಾಣ,ಉಳ್ಳಾಲ ತಾಲೂಕಿನ ಎಲ್ಲಾ ಬಿಲ್ಲವ ಸಂಘಗಳನ್ನು ಒಟ್ಟು ಸೇರಿಸಿಕೊಂಡು ಕೊಲ್ಯ ಬಿಲ್ಲವ ಸಂಘದ ಸ್ಪಷ್ಟ ಮತ್ತು ದಿಟ್ಟ ಹೆಜ್ಜೆ.
ಫೆಬ್ರವರಿ 25 ಆದಿತ್ಯವಾರ ಕೊಲ್ಯ ಬಿಲ್ಲವ ಸಂಘದ ಹೊರಾಂಗಣದ ವಿಶಾಲ ಪ್ರದೇಶದಲ್ಲಿ ಉಳ್ಳಾಲ ತಾಲೂಕಿನ ಪ್ರತೀ ಬಿಲ್ಲವ ಮನೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಒಗ್ಗಟ್ಟಿನ ಮೂಲಕ ಒಟ್ಟು ಸೇರಲಿರುವ ಬಿಲ್ಲವರು ಉಳ್ಳಾಲ ತಾಲೂಕು ಬಿಲ್ಲವರ ಸಮಾವೇಶದ ಮೂಲಕ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶದಂತೆ ಪ್ರತೀ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಅವಕಾಶ ವಂಚಿತ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿದೆ ಎಂಬ ಸ್ಪಷ್ಟ ಸಂದೇಶ ನೀಡಲಿದೆ