ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಫೆ.18-19 : ಒಡಿಯೂರು ಕ್ಷೇತ್ರದಲ್ಲಿ ತುಳುನಾಡ ಜಾತ್ರೆ ‘ಒಡಿಯೂರು ರಥೋತ್ಸವ, ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ

Published

on

ಪುತ್ತೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಫೆ.18 ಹಾಗೂ 19 ರಂದು ನಡೆಯಲಿರುವ ತುಳುನಾಡ ಜಾತ್ರೆ ‘ಒಡಿಯೂರು ರಥೋತ್ಸವ, ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಪುತ್ತೂರಿನಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಶುಕ್ರವಾರ ನಡೆಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಹೊರೆಕಾಣಿಕೆ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಗೌರವ ಸಲಹೆಗಾರರು ಸವಣೂರು ಸೀತಾರಾಮ ರೈ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.





ಈ ಸಂದರ್ಭದಲ್ಲಿ ಹೊರೆಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಉಪಾಧ್ಯಕ್ಷರಾದ ಗೋಪಿನಾಥ ಶೆಟ್ಟಿ ಪುತ್ತೂರು, ಸುಧೀರ್ ನೋಂಡ, ಕಾರ್ಯಾಧ್ಯಕ್ಷ ಕೃಷ್ಣ ಎಂ. ಅಳಿಕೆ, ಪಿ.ಕೆ.ಗಣೇಶ್, ನವೀನ್ ಕುಮಾ‌ರ್ ಬೆದ್ರಾಳ, ದಿನೇಶ್ ಜೈನ್, ಚಂದ್ರಶೇಖರ ಸೂತ್ರಬೆಟ್ಟು, ಉದಯ ಕುಮಾರ್ ಎಸ್., ಹರಿಣಾಕ್ಷಿ ಜೆ.ಶೆಟ್ಟಿ, ನಯನಾ ರೈ, ಶಾರದಾ ಅರಸ್, ಹೀರಾ ಬಿ. ಎಸ್. ಮತ್ತಿತರರು ಉಪಸ್ಥಿತರಿದ್ದರು. ನವೀನ್ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಅಕ್ಕಿ, ಬಾಳೆಗೊನೆ, ಸೇರಿದಂತೆ ವಿವಿಧ ತರಕಾರಿಗಳನ್ನು ಹೊತ್ತ ಹೊರೆಕಾಣಿಕೆ ನೂರಾರು ವಾಹನಗಳು ಒಡಿಯೂರು ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ತೆರಳಿತು.

Continue Reading
Click to comment

Leave a Reply

Your email address will not be published. Required fields are marked *

Advertisement