Published
1 year agoon
By
Akkare Newsಉಳ್ಳಾಲ: ಪುತ್ತೂರು ಮೂಲದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.ಪುತ್ತೂರಿನ ಮುಕೈ ನಿವಾಸಿ ಪ್ರಸ್ತುತ ಕೋಟೆಕಾರು ಬಳಿಯ ಮಾಡೂರಿನ ಪಿಜಿಯಲ್ಲಿದ್ದು, ದೇರಳಕಟ್ಟೆ ಖಾಸಗಿ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ಚೈತ್ರಾ (27) ನಾಪತ್ತೆಯಾದ ವಿದ್ಯಾರ್ಥಿನಿ.
ಚೈತ್ರಾಳ ತಂದೆ ಮೃತರಾಗಿದ್ದು ಮಂಗಳೂರಿನ ಸಂಬಂಧಿಕರ ಆಶ್ರಯದಲ್ಲಿದ್ದುಕೊಂಡು ಎಂ.ಎ. ವ್ಯಾಸಂಗ ಮಾಡಿದ್ದಳು. ಫೆ.17 ರಂದು ಬೆಳಿಗ್ಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ದೂರಲಾಗಿದೆ.