Published
10 months agoon
By
Akkare Newsಪುತ್ತೂರು: ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಕೃಷಿಕರಿಗೆ ಅತೀ ಅಗತ್ಯವಿರುವ ಉತ್ಪನಗಳ ತಯಾರಿಕೆಯಲ್ಲಿ ಕಳೆದ 28 ವರ್ಷಗಳಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳು, ತಂತ್ರಜ್ಞಾನ ಹಾಗೂ ಸೇವೆಯ ಮೂಲಕ ತನ್ನದೇ ಆದ ಛಾಪನ್ನು ಒತ್ತಿ ಯಶಸ್ಸಿನ ಹೆಜ್ಜೆ ಇಡುತ್ತಿರುವ ಪುತ್ತೂರಿನ ಆಕರ್ಷಣ್ ಇಂಡಸ್ಟ್ರಿಸ್ ಈ ಬಾರಿ ಕೃಷಿಕರಿಗೆ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ.
ಸಂಸ್ಥೆಯು ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಪ್ರತಿ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಲಕ್ಕಿ ಕೂಪನ್ಗಳನ್ನು ನೀಡಿದೆ. ಕೃಷಿಕರು ಈ ಕೂಪನ್ಗಳನ್ನು ಪಡೆದುಕೊಂಡು, ಮಾಹಿತಿಗಳನ್ನು ತುಂಬಿಸಿ ಹಿಂದಿರುಗಿಸಲು ಇಂದಿನಿಂದ ಮಾ.5ರ ವರೆಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಮಾ.5ರವರೆಗೆ ಕೂಪನ್ ವಿತರಣೆ ನಡೆಯಲಿದ್ದು ಮಾ.9ರಂದು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಕೂಪನ್ ವಿಜೇತರಾದ ಕೃಷಿ ಮಿತ್ರರಿಗೆ 5 ಚಿನ್ನ ಹಾಗೂ 25 ಬೆಳ್ಳಿಯ ನಾಣ್ಯ ಗೆಲ್ಲುವ ಸುವರ್ಣಾವಕಾಶವನ್ನು ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಸಂಸ್ಥೆಯು ಒದಗಿಸಿದೆ.
ಉಚಿತ ಡೆಲಿವರಿ
ಅಲ್ಲದೆ ಫೆ.21ರಿಂದ ಕೃಷಿಕರ ಅನುಕೂಲಕ್ಕಾಗಿ ವಿವಿಧ ಕೃಷಿ ಉಪಯೋಗಿ ಉತ್ಪನ್ನಗಳಾದ ಟ್ರ್ಯಾಗನ್ ಫುಟ್ ಸ್ಟ್ಯಾಂಡ್, ಬೇಲಿ ಕಂಬ, ವೈ ಪೋಲ್ ಅಲ್ಲದೆ ಕಾಳುಮೆಣಸು ಫಾರ್ಮ್ ಗಳಲ್ಲಿ ಬಳಕೆಯಾಗುವ ವಿಯೆಟ್ನಾಮ್ ಮಾಡೆಲ್ನ ಕಾಂಕ್ರೀಟ್ ಪೋಲ್ಗಳನ್ನು ನಿಗದಿಪಡಿಸಿದ ಅವಧಿಯೊಳಗೆ, ನಿಗದಿತ ಸ್ಥಳಗಳಿಗೆ, ಕೃಷಿಕರ ಮನೆ ಬಾಗಿಲಿಗೆ ಉಚಿತವಾಗಿ ಸಾಗಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಉಚಿತ ಡೆಲಿವರಿ ಕೆಲವು ದಿನಗಳವರೆಗೆ ಮಾತ್ರ ಇರಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
1996ರ ಅ.21 ರಂದು ಸಿಮೆಂಟ್ ಇಟ್ಟಿಗೆ ತಯಾರಿ ಹಾಗೂ ಮಾರಾಟದ ಮೂಲಕ ಉದ್ಯಮ ಜಗತ್ತಿಗೆ ಕಾಲಿಟ್ಟ ಸಂಸ್ಥೆಯು ಇದೀಗ ಹತ್ತು ಹಲವು ಉತ್ಪನ್ನಗಳ ಮೂಲಕ ಜಿಲ್ಲೆಯಾದ್ಯಂತ ಮನೆ ಮಾತಾಗಿದೆ. ಈ ಸಂಸ್ಥೆಯು ಹಲವು ಉತ್ಪನ್ನಗಳು ರಾಜ್ಯಾದ್ಯಂತ ಸರಬರಜಾಗುತ್ತಿದ್ದು ಡೀಲರ್ ಗಳ ಮೆಚ್ಚಿನ ಸಂಸ್ಥೆಯಾಗಿಯೂ ಬೆಳೆದಿದೆ.