Published
10 months agoon
By
Akkare Newsಮಂಗಳೂರಿನ ಓಶಿಯನ್ ಪರ್ಲ್ ಹೋಟೆಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತ್ರಿಸ್ಥರ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ “ಹೊಂಬೆಳಕು 2024” ಎಂಬ ಸ್ಥಳಿಯಾಡಳಿತ ಸಂಭ್ರಮ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟವನ್ನು ಮುಂಬರುವ
ದಿನಾಂಕ “02 ಮಾರ್ಚ್ 2024″ರಂದು ಸಹ್ಯಾದ್ರಿ ಮೈದಾನ ದಲ್ಲಿ ನಡೆಸಲಾಗುವುದರ ಬಗ್ಗೆ ಗ್ರಾಮ ಸ್ವರಾಜ್ಯ ಟ್ರಸ್ಟ್ (ರಿ) ನ ಗೌರವಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ “ಶ್ರೀ ಮಂಜುನಾಥ ಭಂಡಾರಿ” ಯವರು ಪತ್ರಿಕಾ ಗೋಷ್ಠಿ ನಡೆಸಿದರು. ಹಾಗೂ “ಹೊಂಬೆಳಕು ಕಾರ್ಯಕ್ರಮದ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು”
ಈ ಸಂದರ್ಭ ವಿಧಾನ ಪರಿಷತ್ ಶಾಸಕರಾದ ಶ್ರೀ ಹರೀಶ್ ಕುಮಾರ್ , ಕೆ.ಸುಭಾಶ್ಚಂದ್ರ ಶೆಟ್ಟಿ, ಪ್ರವೀಣ್ ಆಳ್ವ, ಲಾರೆನ್ಸ್ ಡಿಸೋಜಾ ರವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು .