ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಸರಕಾರದ ರಿಯಾಯಿತಿ ದರದ ಸಾಲಗಳು ದ.ಕ ಉಡುಪಿಯಲ್ಲಿ ಅನುಷ್ಠಾನವಾಗಿಲ್ಲ ಯಾವುದೇ ಸಹಕಾರಿ ಸಂಘದಲ್ಲೂ ಕೃಷಿಕರಿಗೆ ಈ ಸಾಲಸಿಗುತ್ತಿಲ್ಲ; ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ರೈ

Published

on

ಪುತ್ತೂರು: ರಾಜ್ಯ ಸರಕಾರವು ಕೃಷಿಕರ, ರೈತರ ಪರವಾಗಿದೆ, ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ನೀಡುತ್ತಿಲ್ಲ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತ ೩ ಲಕ್ಷದಿಂದ ೫ ಲಕ್ಷಕ್ಕೆ ಏರಿಸಿತ್ತು, ಶೇ. ೩ ಬಡ್ಡಿದರದಲ್ಲಿ ಕೃಷಿಕರಿಗೆ ದೊರೆಯುತ್ತಿದ್ದ ಸಾಲದ ಮೊತ್ತವನ್ನು ೧೦ ರಿಂದ ೧೫ ಲಕ್ಷಕ್ಕೆ ಏರಿಕೆ ಮಾಡಿದೆ ಆದರೆ ಈ ಎರಡೂ ಯೋಜನೆಗಳು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ ಇದುವರೆಗೂ ಯಾವುದೇ ಕೃಷಿಕರಿಗೆ ಯೋಜನೆಯ ತಲುಪಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದರು.

ಅಧಿವೇಶನದಲ್ಲಿ ಮಾತನಾಡಿದ ಶಾಸಕರು ಸರಕಾರ ಕೃಷಿಕರ ಅಥವಾ ರೈತರಿಗೆ ನೆರವಾಗಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಸರಕಾರ ನೀಡಿದ ಸೌಲಭ್ಯವನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಆದರೆ ಈ ಯೋಜನೆಯಿಂದ ಕರಾವಳಿ ಜಿಲ್ಲೆಯ ಕೃಷಿಕರು ವಂಚಿತರಾಗಿದ್ದಾರೆ. ಉಭಯ ಜಿಲ್ಲೆಗಳ ಯಾವುದೇ ಸಹಕಾರಿ ಸಂಘಗಳಲ್ಲಿ ಈ ಸಾಲವನ್ನು ಕೃಷುಕರಿಗೆ ನೀಡುತ್ತಿಲ್ಲ ಎಂದು ಸರಕಾರದ ಗಮನಕ್ಕೆ ತಂದರು.






ಈಗಾಗಲೇ ೬೭೧೫ ಅರ್ಜಿಗಳು ಬಂದಿದ್ದು ಈ ಪೈಕಿ ೬೩೫೪ ಅರ್ಜಿದಾರರಿಗೆ ಸಾಲವನ್ನು ನೀಡಲಾಗಿದೆ. ದಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರು ಮಾತ್ರ ಈ ಸಾಲದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ಸಹಕಾರಿ ಸಂಘಗಳಲ್ಲಿ ಸಾಲವನ್ನು ನೀಡುತ್ತಿಲ್ಲ ಎಂದು ಅಧಿವೇಶನದಲ್ಲಿ ಪ್ರಶ್ನಿಸಿದ ಶಾಸಕರು ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದ ಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಗೆ ಸರಕಾರದ ಕೃಷಿ ಸಾಲ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪೀಕರ್ ಯು ಟಿ ಖಾದರ್ ದ್ವನಿಗೂಡಿಸಿದರು.

ಲೋಪವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಚಿವರ ಸ್ಪಷ್ಟನೆ
ಸರಕಾರ ಜಾರಿಗೆ ತಂದಿರುವ ಶೂನ್ಯ ಬಡ್ಡಿದರದಲ್ಲಿ ದೊರೆಯುವ ಅಲ್ಪಾವಧಿ ಸಾಲ ಮತ್ತು ಶೇ. ೩ ಬಡ್ಡಿದರದಲ್ಲಿ ದೊರೆಯುತ್ತಿದ್ದ ಸಾಲದ ಮೊತ್ತವನ್ನು ೧೦ ರಿಂದ ೧೫ ಲಕ್ಷಕ್ಕೆ ಏರಿಕೆ ಮಾಡಿತ್ತು. ಅರ್ಹ ಕೃಷಿಕರಿಗೆ ಈ ಸಾಲವನ್ನು ನೀಡಲಾಗಿದೆ. ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ವಿಳಂಬವಾಗಿರುವ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. ಯಾವ ಕಾರಣಕ್ಕೆ ಹೀಗಾಯ್ತು ಎಂಬುದನ್ನು ಪರಿಶೀಲಿಸುತ್ತೇನೆ. ಅರ್ಹ ಫಲಾನುಭವಿಗಳನ್ನು ಹುಡುಕಿ ಅಂಥವರಿಗೆ ಸಾಲವನ್ನು ಕೊಡುವ ಕೆಲಸವನ್ನು ಮಾಡುವುದಾಗಿ ಸಚಿವ ಪ್ರಿಯಾಂಗ ಖರ್ಗೆ ಸ್ಪಷ್ಟಪಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement