ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಸಂಚಲನ ಸೃಷ್ಟಿಸಿದ ಬಿಜೆಪಿ ತುರ್ತುಪತ್ರಿಕಾಗೋಷ್ಠಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಆಹ್ವಾನ ; ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿಗೆ ಸೇರ್ಪಡೆ ನಂತರ ಸ್ಥಾನಮಾನ ನೀಡುವ ಬಗ್ಗೆ ಚಿಂತನೆ ಬಿಜೆಪಿ ಜಿಲ್ಲಾಧ್ಯಕ್ಷ: ಸತೀಶ್ ಕುಂಪಲ

Published

on

ಮಂಗಳೂರು : ರಾಜ್ಯ ನಾಯಕರ ಜೊತೆ ಮಾತುಕತೆ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಜಿಲ್ಲೆ ಅಥವಾ ಪುತ್ತೂರು ಮಂಡಲ ಸ್ಥಾನ ಅಪೇಕ್ಷೆ ಪಟ್ಟಿದ್ದರು ಷರತ್ತು ಹಾಕಿ ಸೇರೊದು ಸರಿಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.ಭಾರತ ದೇಶದ ಇವತ್ತಿನ ಪರಿಸ್ಥಿತಿಯನ್ನು ಗಮನದಲ್ಲಿರಸಿ ರಾಷ್ಟ್ರೀಯ ಅಧ್ಯಕ್ಷರು ಶ್ರೀ ಜೆ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ಅವರೂ ಜನಸಾಮಾನ್ಯರು ಕೂಡಾ ಬಿಜೆಪಿಗೆ ಬರಬೇಕು ಎಂದು ಕರೆನೀಡಿದ್ದಾರೆ.

ಹೀಗಿರುವಾಗ ನಮ್ಮ ಜಿಲ್ಲೆಯವರಾದ ಅರುಣ್ ಪುತ್ತಿಲ ಮತ್ತು ಇತರರು ಬಿಜೆಪಿ ಸೇರುವ ಬಗ್ಗೆ ವಿಶೇಷವಾದ ಚರ್ಚೆ ನಡೆಯುತ್ತಿದೆ. ಅವರು ಬಿಜೆಪಿ ಸೇರ್ಪಡೆಗೆ ಈಗಲೂ ಮುಕ್ತವಾಗಿ ಆಹ್ವಾನವನ್ನು ನೀಡುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅರುಣ್ ಪುತ್ತಿಲ ಅವರ ಕರೆಗೆ ನಾವು ಸ್ಪಂದನೆ ನೀಡಲಿಲ್ಲಾ ಸ್ಥಳೀಯ ಮುಖಂಡರು ಅವರನ್ನು ದೂರ ಇರಿಸುವ ಪ್ರಯತ್ನ ನಡೀತಿದೆ ಅನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು.

ವಾಸ್ತವವಾಗಿ ಅವರೊಟ್ಟಿಗೆ ರಾಜ್ಯಾಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಮತ್ತು ಹಿರಿಯರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ಹಾಗೂ ಅವರೆಲ್ಲರೂ ಬಿಜೆಪಿ ಗೆ ಸೇರ್ಪಡೆಗೊಳ್ಳಲು ಮುಕ್ತವಾದ ಆಹ್ವಾನ ಕೊಟ್ಟಿರುತ್ತಾರೆ ಎಂಬುವುದನ್ನು ಸ್ವತಃ ರಾಜ್ಯಾಧ್ಯಕ್ಷರು ಕೂಡಾ ಸ್ಪಷ್ಟಪಡಿಸಿದ್ದಾರೆ.ನಮ್ಮ ಪಕ್ಷಕ್ಕೆ ನಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲರೂ ಬೇಕು. ಪ್ರತಿಯೊಬ್ಬರ ಸೇವೆ ಕೂಡಾ ಬಿಜೆಪಿಗೆ ಬೇಕು.






ಇದೀಗ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದಾಗಲಂತೂ ಒಬ್ಬ ವ್ಯಕ್ತಿ ರಾಜ್ಯ ಸಭೆಗೆ ಆಯ್ಕೆಯಾದಾಗ ಪಾಕಿಸ್ಥಾನಕ್ಕೆ ಜೈಕಾರ ಹಾಕಿ ನಮ್ಮ ದೇಶಕ್ಕೆ ಅಪಚಾರ ಎಸಗಿದರೂ ಸರಕಾರಿ ಯಂತ್ರ ಅಪಚಾರ ಎಸಗಿದವರ ಪರವಾಗಿ ನಿಲ್ಲುತ್ತೆ. ಇದರ ಮುಂದುವರಿದ ಭಾಗವೇನೊ ಎಂಬಂತೆ ನಿನ್ನೆಯಷ್ಟೇ ಕಳೆದ ಹತ್ತು ವರ್ಷಗಳ ಕಾಲ ಆತಂಕಿಗಳ ಉಪಟಳದಿಂದ ಶಾಂತವಾಗಿದ್ದ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ ಆಗಿದ್ದನ್ನು ನಾವು ನೋಡಿದ್ದೇವೆ. ಪುನಃ ದೇಶದ ಮೇಲೆ ಆತಂಕದ ಕರಿ ಛಾಯೆ ಮೂಡುತ್ತಿದೆ.

ಆದ್ದರಿಂದ ರಾಷ್ಟ್ರೀಯ ವಿಚಾರಗಳನ್ನು ಪ್ರಧಾನವಾಗಿ ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು ಹಾಗೂ ಅರುಣ್ ಕುಮಾರ್ ಪುತ್ತಿಲ ಅವರೂ ಸಹ ನಮ್ಮ ಪ್ರದಾನಿ ಮೋದಿಜಿಯವರ ಕೈ ಬಲ ಪಡಿಸಲು ಸಹಕಾರಿಯಾಗಬೇಕು.ರಾಜ್ಯಾಧ್ಯಕ್ಷರ ಭೇಟಿ ಸಂಧರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಾರ್ಟಿಯಲ್ಲಿ ಜಿಲ್ಲೆ ಅಥವಾ ಮಂಡಲ ಅಧ್ಯಕ್ಷ ಸ್ಥಾನಮಾನಕ್ಕೆ ಅಪೇಕ್ಷೆ ಪಟ್ಟಿದ್ದರು. ಆಗ ರಾಜ್ಯಾಧ್ಯಕ್ಷರು ಬಿಜೆಪಿ ಪಾರ್ಟಿಗೆ ಯಾರೂ ಕೂಡಾ ಷರತ್ತುಗಳನ್ನು ಒತ್ತಡಗಳನ್ನು ಹೇರುವಂತಹದು ಸರಿಯಲ್ಲಾ ಪ್ರತಿಯೊಬ್ಬರೂ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರಬೇಕು ಆಮೇಲೆ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ನೀಡುವ ಕುರಿತು ನಿರ್ಣಯ ಮಾಡಲಾಗುತ್ತದೆ.

ಹಾಗೇನೆ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾದ ಮೇಲೆ ಅವರಿಗೆ ಸಲ್ಲಬೇಕಾದ ಎಲ್ಲಾ ಗೌರವದೊಂದಿಗೆ ಸ್ಥಾನಮಾನಗಳನ್ನು ನೀಡಲಾಗುವುದು ಎಂಬ ವಿಚಾರವನ್ನು ರಾಜ್ಯಾಧ್ಯಕ್ಷರು ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಈಗಾಗಲೇ ತಿಳಿಸಿದ್ದಾರೆ.ಇವತ್ತೂ ಕೂಡಾ ಅವರಿಗೆ ತಿಳಿಸುವುದೇನೆಂದರೆ ಬಿಜೆಪಿ ಪಕ್ಷಕ್ಕೆ ಬನ್ನಿ ಹಾಗೂ ರಾಷ್ಟ್ರ ಹಿತದ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡೋಣಾ ಮೋದೀಜಿಯವರ ನೇತೃತ್ವದಲ್ಲಿ ಬಲಾಡ್ಯ ರಾಷ್ಟ್ರವನ್ನು ಕಟ್ಟೋಣಾ ಎಂದು ಕುಂಪಲ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement