ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಕ್ರೀಡೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮನೋರಂಜನೆ ಮಾಹಿತಿ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಶಿವಳ್ಳಿ ಕ್ರಿಕೆಟರ್ಸ್ ಪುತ್ತೂರು ವತಿಯಿಂದ ನಡೆದ "ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್" ಅದ್ದೂರಿಯಾಗಿ ಸಂಪನ್ನಗೊಂಡಿದೆ .Published
10 months agoon
By
Akkare Newsಫೆಬ್ರವರಿ 25 ಆದಿತ್ಯವಾರದಂದು “ಶಿವಳ್ಳಿ ಕ್ರಿಕೆಟರ್ಸ್, ಪುತ್ತೂರು” ಸತತ 4ನೇ ವರ್ಷ ಅದ್ದೂರಿಯಾಗಿ ಆಯೋಜಿಸಿರುವ ಶಿವಳ್ಳಿ ಬ್ರಾಹ್ಮಣರ ಆಹ್ವಾನಿತ 13ತಂಡಗಳ ಅಂತರ್ ರಾಜ್ಯ ಮಟ್ಟದ *ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್4* ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಕೂಟವು, “ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ” ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಪಂದ್ಯಕೂಟವನ್ನು ಹಿಂದೂ ಮುಖಂಡ ಶ್ರೀ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿ ಹಿಂದೂ ಸಮಾಜ ಒಗ್ಗಟ್ಟಾಗಿ ಮುಂದೆ ಸಾಗುವಲ್ಲಿ ವಿಪ್ರ ಸಮಾಜ ಮುಖ್ಯ ಪಾತ್ರವಹಿಸಲಿದೆ ಹಾಗೂ ಯುವಕರನ್ನು ಒಗ್ಗೂಡಿಸಲು ಇಂತಹ ಕ್ರಿಕೆಟ್ ಪಂದ್ಯಕೂಟಗಳು ವೇದಿಕೆಯಗಲಿದೆ ಎಂದು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರಿನ ಖ್ಯಾತ ಹೃದ್ರೋಗ ತಜ್ಞರು ಡಾ. ಸುರೇಶ ಪುತ್ತೂರಾಯರು, ಬಿ.ಜೆ.ಪಿ ನಗರ ಮಂಡಲ ಅಧ್ಯಕ್ಷರು ಶ್ರೀ ಪಿ.ಜಿ. ಜಗನ್ನಿವಾಸ್ ರಾವ್, ಅಂಬಿಕಾ ಸಮೂಹ ಸಂಸ್ಥೆಯ ಸಂಚಾಲಕರು ಶ್ರೀ ಸುಬ್ರಹ್ಮಣ್ಯ ನಟ್ಟೋಜ, ಸರಸ್ವತಿ ವಿದ್ಯಾಮಂದಿರದ ಸಂಚಾಲಕರು ಶ್ರೀ ಅವಿನಾಶ್ ಕೋಡಂಕಿರಿ, ಸಂಪದ ಟ್ರೇಡರ್ಸ್ ಮಾಲಕರು ಶ್ರೀ ರಾಜೇಶ್. ಎಸ್, ಬ್ರಹ್ಮಶ್ರೀ ಕುಡುಪು ಪದ್ಮರಾಜ್ ತಂತ್ರಿಗಳು, ಶ್ರೀ ಸತೀಶ್ ಕೆದಿಲಾಯ, ವಕೀಲರು ಶ್ರೀಕೃಷ್ಣ ಕೇಕುಣ್ಣಾಯ, ಶ್ರೀ ಲಕ್ಷೀನಾರಾಯಣ ಕಡಂಬಳಿತ್ತಾಯ, ಶ್ರೀ ರತ್ನಾಕರ್ ರಾವ್ ಮತ್ತು ಇತರರು ಉಪಸ್ಥಿತರಿದ್ದರು.
ಸಾಯಂಕಾಲ ಸಮಾರೋಪ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಶಿವಳ್ಳಿ ಸಂಪದ, ಪುತ್ತೂರು ಇದರ ಅಧ್ಯಕ್ಷರು ಶ್ರೀ ದಿವಾಕರ ನೀಡ್ವಣ್ಣಾಯ, ಮುಖ್ಯ ಅತಿಥಿಗಳಾಗಿ ಪುತ್ತೂರಿನ ಖ್ಯಾತ ಹೃದ್ರೋಗ ತಜ್ಞರು ಡಾ ಜೆ. ಸಿ. ಅಡಿಗ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರ ಪ್ರಧಾನ ಪುರೋಹಿತರು ಶ್ರೀ ಸರ್ವೇಶ್ವರ ಕೇಕುಣ್ಣಾಯ, ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘ. ನಿ ಇದರ ಅಧ್ಯಕ್ಷರು ಶ್ರೀ ಹರೀಶ್ ಪುತ್ತೂರಾಯ, ಶಿವಳ್ಳಿ ಯುವ ಸಂಪಾದದ ಗೌರವಾಧ್ಯಕ್ಷರು ಶ್ರೀ ಉದಯ್ ರಾವ್ ಪಜೀಮಣ್ಣು, ಶಿವಳ್ಳಿ ಸಂಪದ ಪುತ್ತೂರು ಇದರ ಮಾಜಿ ಅಧ್ಯಕ್ಷರು ಶ್ರೀ ರಂಗನಾಥ ರಾವ್, ಪಾವಂಜೆ ಶಿವಳ್ಳಿ ಸಂಘದ ಅಧ್ಯಕ್ಷರು ಶ್ರೀ ಸತೀಶ ಭಟ್, ಶ್ರೀ ವೆಂಕಟೇಶ್ಮೂರ್ತಿ ಮತ್ತು ಇತರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಿತು.
ಈ ಪಂದ್ಯಕೂಟದಲ್ಲಿ ಉಡುಪಿ ಜಿಲ್ಲೆ, ಕೊಡಗು ಜಿಲ್ಲೆ, ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಜಿರೆ, ರಾಮಕುಂಜ, ಮಂಗಳೂರು, ಕಟೀಲ್ ಭಾಗಗಳಿಂದ ಸುಮಾರು 150ಕ್ಕೂ ಅಧಿಕ ಕ್ರೀಡಾಳುಗಳು 13 ತಂಡಗಳಾಗಿ ಪಾಲ್ಗೊಂಡರು. ಪಾವಂಜೆ ಶಿವಳ್ಳಿ ಫ್ರೆಂಡ್ಸ್ ತಂಡ ಪ್ರಥಮ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಉಜಿರೆ ವಿಪ್ರಪ್ರಿಯರು ತಂಡ ಮೂರನೇ ಬಾರಿಗೆ ದ್ವಿತೀಯ ಸ್ಥಾನ ಅಲಂಕರಿಸಿತು. ಪುತ್ತೂರು ಶಿವಳ್ಳಿ ಕ್ರಿಕೆಟರ್ಸ್ ಮತ್ತು ರಾಮಕುಂಜ ಸ್ಟ್ರೈಕ್ರ್ಸ್ ತಂಡ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿತು.
ಪಾವಂಜೆ ತಂಡದ ಅವನೀಶ್ ಅತ್ಯುತ್ತಮ ಸರಣಿ ಪ್ರಶಸ್ತಿ ಪಡೆದರೆ, ಶಿವಳ್ಳಿ ಕ್ರಿಕೆಟರ್ಸ್ ತಂಡದ ಹೊಡೆಬಡಿಯ ದಾಂಡಿಗ ಗಣಪತಿ ಬಾಯಾರಿ ಅತ್ಯುತ್ತಮ ಬ್ಯಾಟರ್ ಹಾಗೂ ಉಜಿರಿಯ ನಿರಂಜನ್ ಅತ್ಯುತ್ತಮ ಬೌಲರ್ ಆಗಿ ಹೊರಹೋಮ್ಮಿದರು. ಕಾರ್ಯಕ್ರಮವನ್ನು ಶ್ರೀ ಹರಿಕೇಶವ್ ಕಲ್ಲೂರಾಯ ನಿರೂಪಿಸಿದರು, ಬ್ರಹ್ಮಶ್ರೀ ಸುಜಯ್ ತಂತ್ರಿ, ಕೆಮ್ಮಿಂಜೆ ಸ್ವಾಗತಿಸಿದರು ಮತ್ತು ಶ್ರೀ ಗುರುರಂಜನ್ ಪುಣಿಂಚತ್ತಾಯ ಧನ್ಯವಾದ ಸಮರ್ಪಿಸಿದರು.