ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಬೆದ್ರಾಳ ನಂದಿಕೇಶ್ವರ‌ಭಜನಾ ಮಂದಿರದ ವಾರ್ಷಿಕೋತ್ಸವ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ: ಅಶೋಕ್ ರೈ

Published

on

ಪುತ್ತೂರು: ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಗಂಡಾಂತರಕ್ಕೆ ಕಾರಣವಾಗಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆತ್ತು ಹೊತ್ತು ಸಾಕಿದ ತಂದೆ ,ತಾಯಿಯನ್ನು‌ಮಕ್ಕಳು ದೂರ ಮಾಡುವ ಕಾಲ ಬಂದಿದೆ, ಸಹೋದರರ ನಡುವೆ ಆಸ್ತಿಗಾಗಿ ಕಚ್ಚಾಟ ಹೆಚ್ಚಾಗಿದೆ, ಸಂಭಂಧಗಳೇ ಇಲ್ಲದೆ ಬದುಕುವ ವಾತಾವರಣ ಸೃಷ್ಟಿಯಾಗುತ್ತಿದೆ. ದೇವರ ಬಗ್ಗೆ ಮಾತನಾಡುತ್ತಾರೆ ಆದರೆ ಮನೆಯಲ್ಲೇ ಇರುವ ಮಾತನಾಡುವ ದೇವರನ್ನು ಆಶ್ರಮಕ್ಕೆ ಸೇರಿಸುತ್ತೇವೆ ಇದೆಂತ ನ್ಯಾಯವಾಗಿದೆ ಎಂದು ಹೇಳಿದರು.






ಕಷ್ಟದಲ್ಲಿದ್ದವರಿಗೆ ನೇರವಾಗುವುದೇ ನಿಜವಾದ ಧರ್ಮವಾಗಿದೆ. ದೇವರ ಮೇಲಿನ‌ನಂಬಿಕೆ ನಮಗೆ ಬದುಕನ್ನು ಕೊಡುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿದರೆ ನಮಗೆ ಗೌರವ ಸಮಾಜದಲ್ಲಿ ದೊರೆಯುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ‌ಮಾಜಿ ಶಾಸಕ‌ಸಂಜೀವ ಮಠಂದೂರು, ಹಿಂದೂ ಸಂಘಟನೆಯ ಮುಖಂಡ ಅರುಣ್ ಪುತ್ತಿಲ,ಸುಜಯ್ ತಂತ್ರಿ ಉಪ್ಪಳ,ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷರಾದ ವರುಣ್ ಕುಮಾರ್ ಜೈನ್,ಉದ್ಯಮಿ ಉಮೇಶ್ ನಾಡಾಜೆ ಉಪಸ್ಥಿತರಿದ್ದರು. ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement