Published
9 months agoon
By
Akkare Newsಬೆಂಗಳೂರು: ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕುತೂಹಲ ಕೆರಳಿಸಿತ್ತು.
ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲಿಗೆ ಕ್ಷೇತ್ರ ಕೈತಪ್ಪಿದ್ದು, ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅವಕಾಶ ನೀಡಲಾಗಿದೆ.
ಉಡುಪಿಯಿಂದ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕಣಕ್ಕೆ ಇಳಿಯಲಿದ್ದಾರೆ. ಈ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೇಟ್ ನೀಡಲಾಗಿದೆ.
ಬೆಂಗಳೂರು ಉತ್ತರ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೇಟ್ ಕೈತಪ್ಪಿದೆ.ಮೈಸೂರಿನಿಂದ ಯದುವೀರ್ ಕಣಕ್ಕೆ ಇಳಿಯಲಿದ್ದು, ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ನೀಡಿಲ್ಲ.