ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ ರಂಜಿಸಿದ ಕೋಡಂದೂರು ಅಮ್ಮ ಮಗಳ ದ್ವಂದ್ವ ಗಾಯನ

Published

on

ಪುತ್ತೂರು :ಹತ್ತೂರ ಭಕ್ತರಲ್ಲಿ ಮನೆ ಮಾಡಿದ ಪುತ್ತೂರು ಒಡೆಯನ ಮಹಾಶಿವರಾತ್ರಿಯ ಸಂಭ್ರಮದಲ್ಲಿ ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೋಡಂದೂರ್ ಅಮ್ಮ ಮಗಳ ದ್ವಂದ್ವ ಗಾಯನವೂ ನಟರಾಜ ವೇದಿಕೆಯಲ್ಲಿ ಭಕ್ತರ ಮನಸೆಳೆಯಿತು ಮಹಾ ಮಹಿಮನ ಆರಾಧನೆಯಲ್ಲಿ ಮಗ್ನರಾದ ಶಿವಭಕ್ತ ವೃಂದಕ್ಕೆ ಸಂಗೀತ ಕಲಾ ಸೇವೆಯನ್ನು ನೀಡಿ ಮನಸೆಳೆದರು.

ಜನಪ್ರಿಯ ಶಿವ ಗೀತೆಗಳು ಸುಮಧುರ ಗೀತೆಗಳನ್ನು ಹಾಡಿ ತನ್ನ ಹೆಜ್ಜೆ ಗುರುತಿನಿಂದ ಎಲ್ಲರ ಮೆಚ್ಚುಗೆ ಗಳಿಸಿದರು ಶಿವನೆಂದರೆ ದೈವಗಳಿಗೆ ಮಹಾದೇವ ಸತ್ಯ ಸತ್ವಗಳ ಅನುಭವ ಇಂತಹ ಶಿವನ ಕುರಿತು ಹತ್ತಕ್ಕೂ ಹೆಚ್ಚು ಕವಿತೆಗಳ ಮಧುರ ಕಾವ್ಯ ಗುಚ್ಚವಿದು ಸುಮಧುರ ಹಿನ್ನೆಲೆ ಪಕ್ಕ ವಾದ್ಯಗಳೊಂದಿಗೆ ಹೆಣೆದ ಸುಂದರ ಗುಚ್ಚವಿದು. ಶಿವರಾತ್ರಿ ಸಂಭ್ರಮ ಶಿವಾನಂದ ವರ್ಣ ರಂಜಿತ ಗೀತಾಂಜಲಿ ಮೊದಲಿಗೆದರು ವರ್ಣದ ರೇವತಿರಾಗದ ಆದಿತಾಳ ಡಾ. ನಾಗಮಣಿ ಶ್ರೀನಾಥ್ ರಚನೆಯ ಓಂ ಶಂಭೋ ಮಹಾದೇವ ಹಾಡನ್ನು ಹಾಡಿದರು.ರಾಗ ಕನಕಾಂಗಿ ಚತುರಶ್ರ ರೂಪಕ ತಾಳ ಡಾ. ಬಾಲಮುರಳಿ ಕೃಷ್ಣ ರಚನೆ ಶ್ರೀಶ ಪುತ್ರಾಯ ಹಾಡನ್ನು ಸುಂದರವಾಗಿ ಪ್ರಸ್ತಾವಳಿಸಿದರು. ತದನಂತರ ವೆಂಕಟ ಕವಿ ರಚನೆ ಕಲ್ಯಾಣ ರಾಮ ಆದಿ ತಾಳ ಹಾಡಿ ರಂಜಿಸಿದರು ರಾಗ ರೇವಾಗುಪ್ತಿ ಮಿಶ್ರ ಚಾಪು ತಾಳದ ಸ್ವಾತಿ ತಿರುನಾಳ್ ರಚನೆಯ ಗೋಪಾಲಕ ಪಾಹಿಮಾನ್ ಹಾಡನ್ನು ಹಾಡಿದರು.






ಶಿವರಂಜನ್ ಭಜನ್ ಶಿವಸ್ತುತಿ ಶಿವಾಯ ಸಂಗೀತದ ನಾದ ಸುತ್ತಾಟ ರಾಗ ಚೌಳಿ ಆದಿತಾಳ ಅಣ್ಣಮಚಾರ್ಯ ರಚನೆಯ ಬ್ರಹ್ಮಮೋಕ್ಕಟೆ ಸರ್ವರನ್ನು ಬಾ.. ಎಂದು ಕರೆದಂತಿತ್ತು
ರಾಗ ಬೃಂದಾವನ ರಾಗದ ಸಾರಂಗ ಡಾ. ಬಾಲಮುರಳಿ ಕೃಷ್ಣ ರಚನೆ ತಿಲ್ಲಾನ ಹಾಡಿನೊಂದಿಗೆ ಸಮಾಪ್ತಿಯಾಯಿತು.ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ದ.ಕ ಉಡುಪಿ ಅವರ ಸಹಭಾಗಿತ್ವದಲ್ಲಿ ನಡೆಯಿತು.ಹಿಮ್ಮೇಳನದಲ್ಲಿ ಕೊಳಲು ವಾದಕರಾಗಿ ವಿದ್ವಾನ್ ಕೃಷ್ಣ ಗೋಪಾಲ್, ಮೃದಂಗ ವಾದಕರಾಗಿ ವಿದ್ವಾನ್ ಡಾ. ಶ್ರೀ ಪ್ರಕಾಶ್ ತಬಲ ವಾದಕರಾಗಿ ವಿದ್ವಾನ್ ಸಾಯಿ ನಾರಾಯಣ ಕಲ್ಮಡ್ಕ ,ಶ್ರೀ ರಕ್ಷಾ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.

ನಾವು ಎಷ್ಟೇ ಒಳ್ಳೆಯವರಾದರು ಚುಚ್ಚಿ ಮಾತಾಡುವ ಜನರು ಇದ್ದೇ ಇರುತ್ತಾರೆ ಹಾಗಂತ ತಲೆಕೆಡಿಸಿಕೊಳ್ಳಬೇಡಿ ಹೂವನ್ನು ಸೂಜಿಯಿಂದ ಪೋಣಿಸುವಾಗ ಅದು ನೋವು ಪಟ್ಟುಕೊಳ್ಳುವುದಿಲ್ಲ ಅದು ಹೂವಿನ ಹಾರವಾಗಿ ದೇವರ ಕೊರಳನ್ನು ಸೇರಿಕೊಳ್ಳುತ್ತದೆ ಹಾಗೆ ಸುಂದರ ಹಾಡುಗಳನ್ನು ಆಯ್ಕೆ ಮಾಡಿ ಒಂದೊಂದೇ ಹಾಡುಗಳನ್ನು ಪೋಣಿಸುತ್ತಾ ಬಂದು ಒಂದು ಸುಂದರ ಸ್ವರಾಂಜಲಿ ಸ್ವರಾಭಿಷೇಕ ನೀಡಿ ಎಲ್ಲರ ಮೆಚ್ಚುಗೆ ಸ್ವರ ಸಿಂಚನ ಕಲಾತಂಡ ಆಹಾ.ಎಂಥಾ ಪದ ಬಿನ್ನ ವಿಭಿನ್ನ ಜೇಂಕಾರ ಸಂಗೀತ ಸಂಭ್ರಮ.

Continue Reading
Click to comment

Leave a Reply

Your email address will not be published. Required fields are marked *

Advertisement