Published
9 months agoon
By
Akkare Newsಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಿಸಿದ್ದು ಎಪ್ರಿಲ್ 19 ರಿಂದ ಚುನಾವಣೆ ನಡೆಯಲಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ಕ್ಕೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.
ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ಪ್ರಕಟ ಮಾಡಿದ್ದಾರೆ. ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯಲಿದ್ದು, ಎಪ್ರಿಲ್ 26 ರಂದು ಮೊದಲ ಹಂತದ ಮತದಾನ ಮೇ.7 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
ಜೂನ್ 4ರಂದು ಫಲಿತಾಂಶ ಪ್ರಕಟಿಸಲಾಗುವುದು. ಮೊದಲ ಹಂತದ ಮತದಾನ ಏಪ್ರಿಲ್ 19ರಂದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು, ಮೂರನೇ ಹಂತದ ಮತದಾನ ಮೇ 7ರಂದು , ನಾಲ್ಕನೇ ಹಂತದ ಮತದಾನ ಮೇ 13ರಂದು , ಐದನೇ ಹಂತದ ಮತದಾನ ಮೇ 20ರಂದು , ಆರನೇ ಹಂತದ ಮತದಾನ ಮೇ 25ರಂದು ಮತ್ತು ಏಳನೇ ಹಂತದ ಮತದಾನ ಜೂನ್ 1ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಏಪ್ರಿಲ್ 26ರಂದು ಮತದಾನ ನಡೆಯುವ ಕ್ಷೇತ್ರಗಳು: ದಕ್ಷಿಣ ಕರ್ನಾಟಕ
1.ಹಾಸನ (ಸಾಮಾನ್ಯ)
2.ದಕ್ಷಿಣ ಕನ್ನಡ (ಸಾಮಾನ್ಯ)
3.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
4..ತುಮಕೂರು (ಸಾಮಾನ್ಯ)
5.ಮಂಡ್ಯ (ಸಾಮಾನ್ಯ)
6.ಮೈಸೂರು-ಕೊಡಗು (ಸಾಮಾನ್ಯ)
7.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
8. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
9 ಬೆಂಗಳೂರು ಉತ್ತರ (ಸಾಮಾನ್ಯ)
10. ಬೆಂಗಳೂರು ಕೇಂದ್ರ (ಸಾಮಾನ್ಯ)
11. ಬೆಂಗಳೂರು ದಕ್ಷಿಣ (ಸಾಮಾನ್ಯ)
12.ಚಿಕ್ಕಬಳ್ಳಾಪುರ (ಸಾಮಾನ್ಯ)
13.ಕೋಲಾರ (ಪರಿಶಿಷ್ಟ ಜಾತಿ ಮೀಸಲು)
ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: ಉತ್ತರ ಕರ್ನಾಟಕ
1.ಚಿಕ್ಕೋಡಿ (ಸಾಮಾನ್ಯ)
2.ಬೆಳಗಾವಿ (ಸಾಮಾನ್ಯ)
3.ಬಾಗಲಕೋಟೆ (ಸಾಮಾನ್ಯ)
4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)
5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
7.ಬೀದರ್ (ಸಾಮಾನ್ಯ) ಕೊಪ್ಪಳ (ಸಾಮಾನ್ಯ)
8.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
9. ಹಾವೇರಿ (ಸಾಮಾನ್ಯ)
10.ಧಾರವಾಡ (ಸಾಮಾನ್ಯ)
11.ಉತ್ತರ ಕನ್ನಡ (ಸಾಮಾನ್ಯ)
12.ದಾವಣಗೆರೆ (ಸಾಮಾನ್ಯ)
13.ಶಿವಮೊಗ್ಗ (ಸಾಮಾನ್ಯ)