ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ರಸ್ತೆ ಬದಿ ನೆಟ್ಟ ಗಿಡಗಳಿಗೆ ನೀರುಣಿಸಿದ ಸಹಾಯಕ ಅರಣ್ಯ ಅಧಿಕಾರಿ ಮತ್ತು ಸ್ಥಳೀಯರು

Published

on

ಪುತ್ತೂರು: ಶಾಸಕರಾದ ಅಶೋಕ್ ಕುಮಾರ್ ರೈ ಯವರ ಮಾರ್ಗದರ್ಶನ ದಲ್ಲಿ ಕಳೆದ ಮಳೆಗಾಲದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ, ದಾರಂದಕುಕ್ಕು, ಕೇಮ್ಮಾಯಿ ಬಳಿ ರಸ್ತೆ ಬದಿಯಲ್ಲಿ ನೆಡಲಾಗಿದ್ದ ಗಿಡಗಳಿಗೆ ನೀರುಣಿಸುವ. ಅರಣ್ಯ ಸಹಾಯಕರ ಮತ್ತು ಸ್ಥಳೀಯರ ತಂಡ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ .


ಸಾಧಾರಣವಾಗಿ ರಸ್ತೆ ಬದಿಯಲ್ಲಿ ಗಿಡ ನೆಟ್ಟರೆ ಮತ್ತೆ ಅದನ್ನು ಕಣ್ಣೆತ್ತಿ ನೋಡುವವರೇ ಇಲ್ಲ. ಬದುಕಿದರೆ ಬದುಕಿತು ,ನೀರಿಲ್ಲದೆ ಸತ್ತರೂ ಆಯಿತು ಎಂಬಂತಿತ್ತು. ಗಿಡಗಳು ಬಿಸಲಿನ ತಾಪಕ್ಕೆ ಬಲಿಯಾಗದಿರಲಿ ಎಂದು ಗ್ರಾಪಂ ಎಲ್ಲಾ ಗಿಡಗಳಿಗೂ ನೀರು ಹಾಕಿದೆ.







ಗ್ರಾಪಂ ಪರಿಸರ ಪ್ರೇಮದ ಬಗ್ಹೆ ಸಾರ್ವಜನಿಕರು‌ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲಾ ಕಡೆಗಳಲ್ಲಿ ಮುಂದುವರೆದರೆ ರಸ್ತೆ ಬದಿಯಲ್ಲಿ ಒಂದಷ್ಟು ಗಿಡ,ಮರಗಳು ನೆರಳಿನ ಆಶ್ರಯ ಕೊಡಬಹುದು.

ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಎಸಿಎಫ್ ಸುಬ್ಬಯ್ಯ ನಾಯ್ಕ್, ಅರಣ್ಯ ವೀಕ್ಷಕ ಶೀನಪ್ಪ, ಅರಣ್ಯ ಇಲಾಖ. ಸಿಬ್ಬಂದಿ ತೇಜ, ಸ್ಥಳೀಯರಾದ ರತ್ನಾಕರ ಪ್ರಭು,ಹರೀಶ್ ಪ್ರಭು ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement