Published
9 months agoon
By
Akkare Newsಜಾತಿ, ಜನಾಂಗ, ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟನ್ನು ಫೇಸ್ಬುಕ್ ಖಾತೆಯಲ್ಲಿ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಮಾ 21 ರಂದು ರಾತ್ರಿ ಬಲ್ಯಗ್ರಾಮ, ಕಡಬ ನಿವಾಸಿ, ದ.ಕ ಜಿಲ್ಲೆಯ ಅಂಬೇಡ್ಕರ್ ಅಪತ್ಬಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠರವರ ಮೊಬೈಲ್ ಗೆ ಬಂದ ಫೇಸ್ಟುಬುಕ್ನ ಲಿಂಕ್ನ್ನು ಪರಿಶೀಲಿಸಿದಾಗ, ಪ್ರವೀಣ್ ಮದ್ದಡ್ಕ ಎಂಬಾತನು ತನ್ನ ಫೇಸ್ಬುಕ್ ಖಾತೆಯಲ್ಲಿ ಜಾತಿ, ಜನಾಂಗ, ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟ್ ಹಾಕಿರುವುದು ಕಂಡುಬಂದಿದೆ .
ಈ ಬಗ್ಗೆ ರಾಜು ಹೊಸ್ಮಠರವರ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ