ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮಾತುಬಿಡ ಮಂಜುನಾಥ ನುಡಿದಂತೆ ನಡೆಯಲು ನಮಗೆ ಶಕ್ತಿ ನೀಡಿದ್ದಾನೆ- ಧರ್ಮಸ್ಥಳದಲ್ಲಿ ಡಿ.ಕೆ.ಶಿವಕುಮಾರ್Published
9 months agoon
By
Akkare Newsಧರ್ಮಸ್ಥಳ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಧರ್ಮಸ್ಥಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಶ್ರೀ ಮಂಜುನಾಥಸ್ವಾಮಿಯು ಅನುಗ್ರಹ ಪಡೆದು ಚುನಾವಣಾ ಯುದ್ದಕ್ಕೆ ಹೊರಟಿದ್ದೇವೆ. ನನಗೆ ಸದಾ ರಕ್ಷಣೆ ನೀಡುವವರು ಶ್ರೀ ಮಂಜುನಾಥ, ಶಿವ. ಹಾಗಾಗಿ ಕ್ಷೇತ್ರಕ್ಕೆ ಬಂದು ದರ್ಶನ ಪಡೆದು ಪೂಜೆ ಸಲ್ಲಿಸಿ ಚುನಾವಣಾ ಕಾರ್ಯಕ್ಕೆ ಇಳಿದಿದ್ದೇನೆ. ಜನ ಆಶೀರ್ವಾದ ಮಾಡುವ ನಂಬಿಕೆಯಿದೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಮಾತುಬಿಡ ಮಂಜುನಾಥ ನುಡಿದಂತೆ ನಡೆಯಲು ನಮಗೆ ಶಕ್ತಿ ನೀಡಿದ್ದಾನೆ. ಅದೇ ದೊಡ್ಡ ಆಶೀರ್ವಾದವಾಗಿದೆ. ಜನರು ನೀಡಿದ ಅವಕಾಶದ ಸದುಪಯೋಗ ಪಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಿಥುನ್ ರೈ, ರಂಜನ್. ಜಿ ಗೌಡ, ನಾಗೇಶ್ ಕುಮಾರ್, ಅಭಿನಂದನ್ ಹರೀಶ್, ಭರತ್, ಅಭಿದೇವ್, ಹಾಗೂ ಇತರರು ಇದ್ದರು.