Published
9 months agoon
By
Akkare Newsಬೆಳ್ತಂಗಡಿ : ನೆರಿಯ ಗ್ರಾಮದ ಅಂಬಟೆ ಮಲೆಯ ಖಾಸಗಿ ಎಸ್ಟೇಟ್ ಒಂದರಲ್ಲಿ ಮರ, ಕಟ್ಟಿಗೆಯನ್ನು ಅಕ್ರಮವಾಗಿ ಕಡಿದು ಸಂಗ್ರಹಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಮರದ ಒಟ್ಟು ಮೌಲ್ಯ 7,02,276 ರೂ. ಎಂದು ಅಂದಾಜಿಸಲಾಗಿದೆ.ಪಾರೆಂಕಿ ಗ್ರಾಮದ ಕೊಲ್ಪೆದ ಬೈಲು ನಜೀರ್, ಚಿಬಿದ್ರೆ ಗ್ರಾಮದ ಮೊಹಮ್ಮದ್ ರಫೀಕ್, ಮಂಗಳೂರು ಬಂದರ್‌ನ ಭರತ್ ಕುಮಾರ್ ಕೊಠಾರಿ ಹಾಗೂ ಎಸ್ಟೇಟ್ ಮ್ಯಾನೇಜರ್ ಗಂಡಿಬಾಗಿಲಿನ ವಿನು ಅವರನ್ನು ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಎಸಿಎಫ್ ಶ್ರೀಧರ್ ಪಿ., ಬೆಳ್ತಂಗಡಿ ಆರ್‌ಎಫ್‌ಒ ಮೋಹನ್ ಕುಮಾರ್ ಬಿ.ಜಿ., ಡಿಆರ್‌ಎಫ್‌ಒ ಯತೀಂದ್ರ ಹಾಗೂ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.