Published
9 months agoon
By
Akkare Newsನಿಲ್ಲಿಸಿದ್ದ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಗೆ ಚಲಿಸಿದ ಕಾರಣದಿಂದ ಹಿಂಬದಿಯಿಂದ ಬಂದ ಟಾ ಟಾ ಏಸ್ ಗಾಡಿ ಡಿಕ್ಕಿ ಹೊಡೆದು ವಾಹನಗಳೆರಡೂ ಜಖಂಗೊಂಡ ಘಟನೆ ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ಸಂಭವಿಸಿದೆ.
ರಸ್ತೆ ಬದಿ ನಿಲ್ಲಿಸಿದ್ದ ಕಾರು ಮುಂದಕ್ಕೆ ಚಲಿಸಲು ರಸ್ತೆಗೆ ನುಗ್ಗಿದ್ದು, ಇದರಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಟಾಟಾ ಏಸ್ ಗಾಡಿ ಕಾರಿಗೆ ಗುದ್ದಿರುವುದಾಗಿ ಹೇಳಲಾಗಿದೆ. ಎರಡೂ ವಾಹನಗಳು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.