Published
9 months agoon
By
Akkare Newsಬೆಂಗಳೂರು: ಮಹದೇವಪ್ಪ, ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬಂಧವಿದೆ ಎಂದು ಚಾಮರಾಜನರ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಇಂದು ನಗರದ ತಮ್ಮ ನಿವಾಸದಲ್ಲಿ ಮಾತಾಡುವಾಗ ಪ್ರಸ್ತುತ ರಾಜಕೀಯ ವಾತಾವರಣ ಕಲುಷಿತಗೊಂಡಿದೆ ಅದರಲ್ಲಿ ಸುಧಾರಣೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳನ್ನು ಮತದಾನದ ಮೂಲಕ ಅಯ್ಕೆ ಮಾಡಬೇಕು ಮತ್ತು ಜನರು ತಮ್ಮ ಪ್ರತಿನಿಧಿಯನ್ನು ಮುಕ್ತವಾಗಿ ಅಂದರೆ ಯಾವುದೇ ಆಸೆ-ಆಮಿಶಗಳಿಗೆ ಒಳಗಾಗದೆ ಆರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಪ್ರಸಾದ್ ಹೇಳಿದರು.