Published
9 months agoon
By
Akkare Newsಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತಡೆಗೋಡೆಗೆ ಢಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಂಭಿರಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಗುರುವಾಯನಕೆರೆಯ ಶಕ್ತಿ ನಗರದ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಬೆಳ್ತಂಗಡಿಯಿಂದ ಮೂಡುಬಿದಿರೆಗೆ ಹೋಗುತ್ತಿದ್ದ ಕಾರು ಶಕ್ತಿನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಕಾಂಪೌಂಡ್ ಗೆ ಢಿಕ್ಕಿಯಾಗಿದೆ.
ಪರಿಣಾಮ ಚಾಲಕ ಲಾಯಿಲ ಮೋರ್ನಿಂಗ್ ಸ್ಟಾರ್ ನಿವಾಸಿ ಪ್ರೈಸ್ ಮ್ಯಾಥ್ಯೂ (32) ಸ್ಥಳದಲ್ಲೇ ಮೃತಪಟ್ಟರೆ , ಕಾರಿನಲ್ಲಿದ್ದ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.