ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಂಗಳೂರು ಕ್ಷೇತ್ರದಲ್ಲಿ ‘ಸೌಜನ್ಯಗಳಿಗಾಗಿ ನೋಟಾ’ ಚಳವಳಿ ಶುರು :“ನಮಗೆ ಈ ಸಲ ಯಾವ ರಾಜಕೀಯ ಪಕ್ಷವೂ ಬೇಡ” ಕೆರಳಿದ ಕರಾವಳಿ ಮತದಾರರು

Published

on

ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೋಟಾ (NOTA) ಅಭಿಯಾನ ಶುರುವಾಗಿದೆ. ಈ ಸಲ ನಾವು ಯಾರಿಗೂ ಮತ ನೀಡುವುದಿಲ್ಲ ನಮ್ಮ ಮತ ‘ ನೋಟಾ’ ಗೆ ಎಂದು ಸೌಜನ್ಯ ಪರ ಹೋರಾಟಗಾರರು ಮತ್ತು ಸೌಜನ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಲಕ್ಷಾಂತರ ಮಂದಿ ಹೇಳುತ್ತಿದ್ದಾರೆ. ಆ ಮೂಲಕ ಮಂಗಳೂರು ಲೋಕಸಭಾ ಕ್ಷೇತ್ರ ಹೊಸದೊಂದು ಹೋರಾಟಕ್ಕೆ ಸಾಕ್ಷಿಯಾಗಿದೆ. ನಮ್ಮ ಮತ NOTA ಗಾಗಿ ಎನ್ನುವ ನಿರ್ಧಾರಕ್ಕೆ ಕರಾವಳಿಯ ಜನ ಬಂದಿದ್ದಾರೆ. ಯಾವ ಅಭ್ಯರ್ಥಿಗಳು ಕೂಡಾ ತನಗೆ ಸೂಕ್ತ ಅಲ್ಲ ಅನ್ನುವ ಸಂದರ್ಭದಲ್ಲಿ ‘ ನೋಟಾ’ ಮತ ಚಲಾಯಿಸಲಾಗುತ್ತದೆ.

ನಿಮಗೆ ಎಲ್ಲರಿಗೂ ತಿಳಿದಿರುವಂತೆ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಒಕ್ಕಲಿಗರ ಹುಡುಗಿಯನ್ನು ಬರ್ಬರ ಹತ್ಯೆ ಮಾಡಿದ ನಂತರ ಆ ಕೊಲೆಯನ್ನು ಮುಚ್ಚಿ ಹಾಕಲು ಧರ್ಮಸ್ಥಳದ ಭೂಪತಿಗಳು ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ತಾನು ಧರ್ಮಾಧಿಕಾರಿ ಎಂದು ಎಲ್ಲರನ್ನು ಕಾಲಿಗೆ ಬೀಳಿಸಿಕೊಳ್ಳುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದ ಮೇಲೆ ಅನುಮಾನಗಳ ಸರಮಾಲೆ ಸುತ್ತಿಕೊಂಡು ಕುಳಿತಿದೆ. ಇಂತಹ ಸಂದರ್ಭದಲ್ಲಿ ಕರಾವಳಿಯ ಹಿಂದೂ ಮತದಾರರಿಗೆ ಕ್ಯಾರೆ ಎನ್ನದೆ ಭಾರತೀಯ ಜನತಾ ಪಕ್ಷ ವೀರೇಂದ್ರ ಹೆಗ್ಗಡೆಯನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿತ್ತು.







ಸ್ಥಳೀಯ ಬಿಜೆಪಿಯ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿಯ ಇತರ ಹಲವು ಬಿಜೆಪಿ ಶಾಸಕರುಗಳು, ಮುಖಂಡರುಗಳು ವೀರೇಂದ್ರ ಹೆಗ್ಗಡೆಯ ಬೆನ್ನಿಗೆ ನಿಂತಿದ್ದರು. ಅಷ್ಟೇ ಅಲ್ಲದೆ, ವಿರೋಧ ಪಕ್ಷಗಳು ಕೂಡ ಲಕ್ಷಾಂತರ ಮಂದಿ ಭಾಗವಹಿಸುವ ಸೌಜನ್ಯ ಹೋರಾಟಕ್ಕೆ ಬೆಂಬಲ ಸೂಚಿಸಲಿಲ್ಲ. ಆಳುವವರು ಬೆಂಬಲ ಸೂಚಿಸದೆ ಹೋದರೂ ದಿನದಿಂದ ದಿನಕ್ಕೆ ಸೌಜನ್ಯ ಹೋರಾಟ ಉಗ್ರವಾಗುತ್ತಿದೆ. ಅದರ ಜೊತೆಗೆ ಧರ್ಮಸ್ಥಳದ ಅಕ್ರಮ ಬಡ್ಡಿ ವ್ಯವಹಾರ, 4000ಕ್ಕೂ ಅಧಿಕ ಎಕರೆಗಳ ಅರಣ್ಯ ಭೂಮಿ ಕಬಳಿಕೆ ಆರೋಪ ಮತ್ತು ಆರೋಪಗಳಿಗೆ ತುಟಿ ಪಿಟಿಕ್ ಎನ್ನದ ಮಾತನಾಡುವ ಮಂಜುನಾಥ ವೀರೇಂದ್ರ ಹೆಗ್ಗಡೆಯ ಅನುಮಾನಾಸ್ಪದ ನಡೆ ಕರಾವಳಿಗರನ್ನು ಕೆರಳಿಸಿದೆ.

ಕೆರಳಿ ನಿಂತ ಕರಾವಳಿ ಮತದಾರರು:
“ನಮಗೆ ಈ ಸಲ ಯಾವ ರಾಜಕೀಯ ಪಕ್ಷವೂ ಬೇಡ, ಸೌಜನ್ಯ ಹೋರಾಟಕ್ಕೆ ಬೆಂಬಲ ಕೊಡುವ ಪಕ್ಷ ಯಾವುದೂ ಇಲ್ಲದೆ ಹೋದರೂ ಸರಿ, ನಾವು ದೇಶದಲ್ಲಿ ಒಂದು ವಿಶಿಷ್ಟವಾದಂತಹ ಹೋರಾಟವನ್ನು ಕೈಗೊಳ್ಳುತ್ತಿದ್ದೇವೆ. ಈ ಸಲ ಲಕ್ಷಾಂತರ ಮತಗಳನ್ನು ನೋಟಾಗೆ ಹಾಕಿಸುವ ಮೂಲಕ ದೇಶದ ಸಂಸತ್ತನ್ನು, ದೇಶದ ಹಲವಾರು ರಾಜ್ಯಗಳ ಹೋರಾಟಗಾರರನ್ನು, ಸುಪ್ರೀಂಕೋರ್ಟ್ ನ್ನು ಮತ್ತು ವಿದೇಶಗಳ ಸರ್ಕಾರಗಳನ್ನು ಕೂಡಾ ಗಮನ ಸೆಳೆಯಬೇಕು – ಎನ್ನುವ ಉದ್ದೇಶದಿಂದ ಸೌಜನ್ಯಾಳಿಗಾಗಿ ನೋಟ ಅಭಿಯಾನ ದೊಡ್ಡದಾಗಿ ಶುರುವಾಗಿದೆ.

7 ಲಕ್ಷ ಮತಗಳ ಗುರಿ !!
ಒಂದು ಅಂದಾಜಿನ ಪ್ರಕಾರ ಕರಾವಳಿಯ 89% ಜನ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಮತ್ತು ಆತನ ಕುಟುಂಬವನ್ನು ದ್ವೇಷಿಸುತ್ತಾರೆ. ಕಳೆದ ಸಲ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 7,74,284 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಿಥುನ್ ರೈ (ಪಡೆದ ಮತ 4,99,664) ವಿರುದ್ಧ 2,74,621 ಮತಗಳ ಅಂತರದಿಂದ ವಿಜಯಿಯಾಗಿದ್ದರು. ಇಲ್ಲಿಯತನಕ ಸೌಜನ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡವರ ಸಂಖ್ಯೆ ಏಳು ಲಕ್ಷಕ್ಕೂ ಅಧಿಕವಿದೆ ಅನ್ನೋ ಮಾಹಿತಿಯಿದೆ. ಈ ಅಂಕಿ ಅಂಶವನ್ನು ನೋಡಿದರೆ, ಅಭ್ಯರ್ಥಿ ಪಡೆಯುವ ಮತಗಳಿಗಿಂತಲೂ ನೋಟಾ ಮತಗಳೇ ಅಧಿಕವಾಗುವ ಸಂಭವ. ಅಂತಹಾ NOTA ಚಳವಳಿ ಇದೀಗ ಆರಂಭವಾಗಿದ್ದು, ತೀವ್ರ ಸಂಚಲನ ಮತ್ತು ಕುತೂಹಲವನ್ನು ಉಂಟುಮಾಡಿದೆ. ‘ಸೌಜನ್ಯಳಿಗಾಗಿ ನೋಟಾ’ ಚಳವಳಿ ಮಂಗಳೂರು ಲೋಕಸಭಾ ಕ್ಷೇತ್ರದ ಒಟ್ಟಾರೆ ಚಿತ್ರಣವನ್ನೇ ಉಲ್ಟಾಪಲ್ಟಾ ಮಾಡಲಿದೆ ಅನ್ನುವುದಂತೂ ಸತ್ಯ.

Continue Reading
Click to comment

Leave a Reply

Your email address will not be published. Required fields are marked *

Advertisement