ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Published

on

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಪೋಟ ಪ್ರಕರಣದ ಮೊದಲ ಆರೋಪಿಯನ್ನು ಬಂಧಿಸಲಾಗಿದೆ.ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎಂಬಾತನನ್ನು ಗುರುವಾರ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಎನ್‌ಐಎ ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದೆ. ಈ ಬಗ್ಗೆ ಎನ್‌ಐಎ ಟ್ವಿಟ್ ಮಾಡಿದ್ದು, ಪ್ರಮುಖ ಆರೋಪಿಯ ಬಂಧನದ ಬಗ್ಗೆ ಖಚಿತಪಡಿಸಿದೆ. ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ದಾಳಿ ಮಾಡಿದ ನಂತರ ಮುಜಾಮಿಲ್ ಶರೀಫ್ ನನ್ನು ಬಂಧಿಸಲಾಗಿದೆ ಎಂದು ಎನ್‌ಐ ಟ್ವಿಟ್‌ನಲ್ಲಿ ತಿಳಿಸಿದೆ.

ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಮುಜಾಮಿಲ್ ಶರೀಫ್ ಕೀ ಕಾಂನ್ನಪರೇಟರ್ ಆಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.ಬಂಧನದ ವೇಳೆ ಈತನ ಬಳಿ ಇದ್ದ ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.ಮುಜಾಮಿಲ್ ಶರೀಫ್ ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಮುಸಾವೀರ್ ಹುಸೇನ್‌ಗೆ ತುಂಬಾ ಆಪ್ತನಾಗಿದ್ದ ಎಂದು ತಿಳಿದು ಬಂದಿದೆ.







ಪ್ರಮುಖವಾಗಿ ಮುನಾವೀರ್ ಹುಸೇನ್ ಬಾಂಬ್ ಇಟ್ಟಿ ಶಂಕಿತ ಉಗ್ರ ಎಂದು ತನಿಖೆ ವೇಳೆ ಪತ್ತೆಯಾಗಿದೆ. ತನಿಖೆ ವೇಳೆ ಸಂಚು ರೂಪಿಸಿರುವುದು ಸಾಬೀತು ಆದ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಫ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಮುಸಾವೀರ್, ಅಬ್ದುಲ್ ಮತೀನ್ ಸೇರಿ ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದರು. ಸದ್ಯ ಮುಸಾವೀರ್ ಹುಸೇನ್, ಮತೀನ್ ತಾಹಾ ತಲೆಮರೆಸಿಕೊಂಡಿದ್ದಾರೆ. ఎందు తెళిదు బందిడి.

Continue Reading
Click to comment

Leave a Reply

Your email address will not be published. Required fields are marked *

Advertisement