ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಅಡಿಕೆ ಆಮದಿನ ವಿರುದ್ಧ ಧ್ವನಿ ಎತ್ತಿ, ಅಡಿಕೆ ರೋಗಬಾಧೆಗಳ ಪರಿಹಾರಕ್ಕಾಗಿ ಸಂಶೋಧನಾ ಕೇಂದ್ರಕ್ಕೆ ಪ್ರಯತ್ನ ಕಡಬ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಸಮರ್ಥ ನಾಯಕ ಪದ್ಮರಾಜ್: ವಿನಯ್ ಕುಮಾರ್ ಸೊರಕೆ ಪದ್ಮರಾಜ್ ಕಾಂಗ್ರೆಸ್ ಪಕ್ಷದ ಆಸ್ತಿಯಾಗ್ತಾರೆ: ಐವನ್ ಡಿಸೋಜ

Published

on

ಕಡಬ: ಅಡಿಕೆ ಆಮದಿನ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಆಗಬೇಕು. ಅಡಿಕೆಗೆ ಎದುರಾಗಿರುವ ರೋಗಬಾಧೆಗಳ ನಿವಾರಣೆಗೆ ಸಂಶೋಧನಾ ಕೇಂದ್ರ ತೆರೆಯುವ ಅಗತ್ಯವಿದೆ. ಇದರ ಜೊತೆಗೆ ಕೃಷಿ ಹಾಗೂ ಕೃಷಿ ಮಾರುಕಟ್ಟೆಗೆ ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಶ್ರಮ ಪಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.

ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಖಂಡಿತವಾಗಿಯೂ ಕಾಂಗ್ರೆಸ್ ಜಯ ಸಾಧಿಸಲಿದೆ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವ. ಹಿಂದೂ ದರ್ಮದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವನು ನಾನು. ಜೊತೆಗೆ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಆದರೆ ಎಲ್ಲಿಯೂ ಕೂಡ ಅಪಪ್ರಚಾರ, ಅಪನಂಬಿಕೆ ಬರುವ ಕೆಲಸ ಮಾಡಿಲ್ಲ. ಆದ್ದರಿಂದ ನಾವು ಯಾರನ್ನು ದ್ವೇಷಿಸುವ, ವಿರೋಧಿಸುವ ಕೆಲಸ ಮಾಡುವುದು ಬೇಡ. ಕಾಂಗ್ರೆಸ್ ಸರಕಾರದ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿ ಮತ ಕೇಳಿ ಎಂದರು.
ನಾಳೆ ತಾನು ಗೆದ್ದು ಬಂದಾಗ ಅದು ಕಾಂಗ್ರೆಸ್ ಪಕ್ಷದ ಹಾಗೂ ನಿಮ್ಮ ಗೆಲುವಾಗಿರುತ್ತದೆ. ಆದ್ದರಿಂದ ಕಾಂಗ್ರೆಸ್ ಗೆಲುವಿಗೆ ಅವಿರತ ಶ್ರಮ ಪಡಬೇಕು ಎಂದರು.

ಸಮರ್ಥ ನಾಯಕ ಪದ್ಮರಾಜ್: ವಿನಯ್ ಕುಮಾರ್ ಸೊರಕೆ
ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ವಕೀಲರಾಗಿ, ಯುವ ನಾಯಕನಾಗಿದ್ದ ಪದ್ಮರಾಜ್ ಆರ್. ಅವರಿಗೆ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ನಮ್ಮೆಲ್ಲ ಸಮಸ್ಯೆಗಳಿಗೂ ಉತ್ತರ ನೀಡುವ ಯುವ ನಾಯಕ ಪದ್ಮರಾಜ್ ಆರ್. ಅವರು. ಆದ್ದರಿಂದ ಅವರನ್ನು ಗೆಲ್ಲಿಸಿಕೊಡಲೇಬೇಕಾಗಿದೆ ಎಂದರು.

ಬಹುವರ್ಷಗಳ ಬೇಡಿಕೆಯಾಗಿದ್ದ ಕಡಬವನ್ನು ತಾಲೂಕಾಗಿ ಘೋಷಣೆ ಮಾಡಿದ್ದು ರಮಾನಾಥ ರೈಗಳ ನೇತೃತ್ವದಲ್ಲಿ, ಸಿದ್ದರಾಮಯ್ಯ ಅವರ ಸರಕಾರ. ಅದೇ ಸಂದರ್ಭ ನಾವು ಕಡಬ ಹಾಗೂ ವಿಟ್ಲವನ್ನು ಪಟ್ಟಣ ಪಂಚಾಯತ್ ಆಗಿಯೂ, ಪುತ್ತೂರನ್ನು ನಗರಸಭೆ ಆಗಿಯೂ ಘೋಷಣೆ ಮಾಡಿದೆವು. ಆದ್ದರಿಂದ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಪರವಾಗಿ ನಿಂತಿದೆ ಎಂದ ಅವರು, ರಮಾನಾಥ ರೈ ಅವರು ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಎಂದರು.
ಪದ್ಮರಾಜ್ ಅವರ ವ್ಯಕ್ತಿತ್ವದಲ್ಲಿ ಸೌಹಾರ್ದತೆಯನ್ನು ಕಾಣಬಹುದು. ಸುಖ, ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎನ್ನುವ ವಿಚಾರ ಕಾಣುತ್ತದೆ. ಈ ಕ್ಷೇತ್ರದ ಅಭಿವೃದ್ಧಿಗೆ ಪದ್ಮರಾಜ್ ಅವರು ಗೆಲ್ಲಲೇಬೇಕು ಎಂದರು.







ಪದ್ಮರಾಜ್ ಕಾಂಗ್ರೆಸ್ ಪಕ್ಷದ ಆಸ್ತಿಯಾಗ್ತಾರೆ:
ಎಐಸಿಸಿ ಸದಸ್ಯ ಐವನ್ ಡಿಸೋಜಾ ಮಾತನಾಡಿ, ನಮ್ಮ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಭಗೀರಥ ಪ್ರಯತ್ನ ಮಾಡಿ. ಅದು ಬಿಟ್ಟು, ಅಶಾಂತಿ, ಭಯ ಹುಟ್ಟಿಸಿ ಮತ ಪಡೆಯುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಸರಕಾರ ನೀಡಿರುವ ಗ್ಯಾರೆಂಟಿಗಳನ್ನು ಮನೆಮನೆಗೆ ತಲುಪಿಸಿ ಎಂದರು.
ಪದ್ಮರಾಜ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ. ಖಂಡಿತವಾಗಿಯೂ, ಅವರು ಕಾಂಗ್ರೆಸ್ ಪಕ್ಷದ ಆಸ್ತಿಯಾಗ್ತಾರೆ. ಬಡವರ ಕಷ್ಟವನ್ನು ಸ್ವತಃ ಅರಿತಿರುವ, ಬಡತನದಿಂದಲೇ ಮೇಲೆ ಬಂದಿರುವ ಪದ್ಮರಾಜ್ ಅವರು ನಮ್ಮನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದರೆ, ನಮ್ಮ ಕಷ್ಟಗಳಿಗೆ ಪರಿಹಾರ ಸಿಗಲಿದೆ ಎಂದರು.ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಪ್ರತಿ ಮನೆಗೂ ತೆರಳಿ ಅವರಿಗೆ ಗ್ಯಾರೆಂಟಿ ಯೋಜನೆಯ ಬಗ್ಗೆ ತಿಳಿಹೇಳಿ. ಬಡತನದಿಂದ ವಿದ್ಯಾಭ್ಯಾಸ ಮಾಡಿ,ಪ್ರಾಮಾಣಿಕ, ಪರಿಶುದ್ಧ ವ್ಯಕ್ತಿತ್ವದ ಪ್ರಾಮಾಣಿಕ ವ್ಯಕ್ತಿ ಪದ್ಮರಾಜ್. ವಕೀಲರಾಗಿ ಅನೇಕ ಸಮಸ್ಯೆಗಳ ಬಗ್ಗೆ ವಕಾಲತ್ತು ಮಾಡಿರುವ ಪದ್ಮರಾಜ್ ಅವರ ಪರವಾಗಿ ಈಗ ನಾವು ವಕಾಲತ್ತು ವಹಿಸಬೇಕಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿಕೊಡಬೇಕು ಎಂದರು.

ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್, ಕೆಪಿಸಿಸಿ ಸದಸ್ಯ ಡಾ. ರಘು, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಚುನಾವಣಾ ಉಸ್ತುವಾರಿ ಬಾಲಕೃಷ್ಣ ಬಳ್ಳೇರಿ, ಸುಳ್ಯ ಪ್ರಚಾರ ಸಮಿತಿ ಉಸ್ತುವಾರಿ ವೆಂಕಪ್ಪ ಗೌಡ, ಕಿರಣ್ ಬುಡ್ಲೆಗುತ್ತು ಮೊದಲಾದವರು ಉಪಸ್ಥಿತರಿದ್ದರು.ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ ಸ್ವಾಗತಿಸಿ, ತಾಪಂ ಮಾಜಿ ಸದಸ್ಯೆ ಉಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement