Published
9 months agoon
By
Akkare Newsಆಲಂಕಾರು: ಇಲ್ಲಿನ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು -ಶಾಂತಿಮೊಗರು ರಸ್ತೆಯ ಬುಡೇರಿಯಾ ಬಳಿ ಆಕ್ಷಿಜನ್ ಸಿಲಿಂಡರ್ ಸಾಗಾಟದ ಮತ್ತು ಟೆಂಪೋ ವಾಹನ ನಡುವೆ ಭೀಕರ ಅಫಘಾತ ಸಂಭವಿಸಿದ್ದು ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಮಾ.30 ರ ರಾತ್ರಿ ನಡೆದಿದೆ.
ಆಲಂಕಾರಿನಿಂದ ಪುತ್ತೂರಿನತ್ತ ಸಾಗುತ್ತಿದ್ದ ಆಕ್ಷಿಜನ್ ಸಿಲಿಂಡರ್ ಸಾಗಾಟದ ಲಾರಿ ಮತ್ತು ಕಡಬದತ್ತ ಬರುತ್ತಿದ್ದ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಟೆಂಪೋ ವಾಹನದಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಗಾಯಾಳುಗಳ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ.
ಬೈಕೊಂದನ್ನು ಟೆಂಪೋ ವಾಹನ ಓವರ್ ಟೇಕ್ ಮಾಡಿರುವುದೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.ಈ ಅಪಘಾತದ ರಭಸಕ್ಕೆ ವಾಹನ ಜಖಂ ಗೊಂಡು ಸಿಲಿಂಡರ್ ಗೆ ಹಾನಿಯಾಗಿ ಗ್ಯಾಸ್ ಸೋರಿಕೆಯಾಗಿದೆ .
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.