ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ನನ್ನ ಬೆಂಬಲ ಬಿಲ್ಲವ ಸಮುದಾಯದ ವ್ಯಕ್ತಿಗಳಿಗೆ ಹೊರತು ಪಕ್ಷಕ್ಕಲ್ಲ :ಬಿಜೆಪಿ ಪಕ್ಷ ನಮ್ಮಂತ ನಿಷ್ಠಾವಂತ ಹಿಂದುತ್ವವಾದಿಗಳನ್ನು ತುಳಿಯುವ ಕೆಲಸ ಮಾಡುತ್ತಿದೆ : ಜಿಲ್ಲೆಯ ಪ್ರಜ್ಞಾವಂತ ಹಿಂದೂ ಬಾಂಧವರು ಪದ್ಮರಾಜ್ ಇವರನ್ನು ಬೆಂಬಲಿಸಿ : ಸತ್ಯಜಿತ್ ಸುರತ್ಕಲ್

Published

on

ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಟಿಕೆಟ್ ವಂಚಿತ ಸತ್ಯಜಿತ್ ಸುರತ್ಕಲ್ ತಮ್ಮ ಹೊಸ ನಡೆಯತ್ತ ಮುಖಮಾಡಿದ್ದಾರೆ. ಈ ಬಾರಿ ತನ್ನ ಬಿಲ್ಲವ ಸಮಾಜದ ಅಭ್ಯರ್ಥಿಗಳ ಪರ ಬೆಂಬಲ ಎಂದ ಹೇಳುವ ಮೂಲಕ ದ.ಕ, ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ತನ್ನ ಸಮಾಜದ ಅಭ್ಯರ್ಥಿಗಳ ಪರ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಇದೀಗ ಕಾಂಗ್ರೆಸ್ ಅಭ್ಯರ್ಥಿಗಳಾದ ಪದ್ಮರಾಜ್, ಗೀತಾ ಶಿವರಾಜಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ ಬೆಂಬಲ ಸೂಚಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಕಳೆದ ಎರಡು ತಿಂಗಳಿನಿಂದ ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನಪಟ್ಟಿದ್ದೆ. ಆದರೆ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್ ಚೌಟಗೆ ಸೀಟ್ ನೀಡಿದ್ರು. ಸೂಕ್ತ ಸ್ಥಾನಮಾನಕ್ಕಾಗಿ ನನ್ನ ಬೆಂಬಲಿಗರು ಬೇಡಿಕೆ ಇಟ್ಟಿದ್ರು.

ಘೋಷಣೆಯಾಗಿ ಎರಡು ಮೂರು ವಾರ ಕಳೆದಿದೆ. ಬಿಜೆಪಿ ವರಿಷ್ಠರು ಹಲವು ಬಾರಿ ಸಮಯಾವಕಾಶ ಕೇಳಿದ್ರು ಆದರೆ ಯಾವುದೇ ಬೆಳವಣಿಗೆಯಾಗಿಲ್ಲ. ಹಾಗಾಗಿ ಟೀಂ ಸತ್ಯಜಿತ್ ಸುರತ್ಕಲ್ ಹಾಗೆಯೇ ಮುಂದುವರೆಯುತ್ತದೆ. ಚುನಾವಣೆಯ ನನ್ನ ಕೆಲಸಗಳಿಗೆ ಅವರ ಬೆಂಬಲ ಇಲ್ಲ.

ಚುನಾವಣೆಯ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಾನು ಸ್ವತಂತ್ರ, ಹಾಗಾಗಿ ನಾನು ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ ನನ್ನ ಸಮಾಜದ ಅಭ್ಯರ್ಥಿಗಳ ಪರ ನಿಲ್ಲುತ್ತೇನೆ ಎಂದಿದ್ದಾರೆ. ಬಹಳ ವರ್ಷಗಳ ನಂತರ ಮೂರು ಸ್ಥಾನಗಳಲ್ಲಿ ನಾರಾಯಣ ಗುರು ಸಮಾಜಕ್ಕೆ ಅವಕಾಶ ಸಿಕ್ಕಿದೆ. ಬಿಜೆಪಿಯಲ್ಲಿ 33 ವರ್ಷಗಳ ಬಳಿಕ ಬಿಲ್ಲವ ಅಭ್ಯರ್ಥಿಗೆ ಅವಕಾಶ ಸಿಕ್ಕಿದೆ. ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಜನಾರ್ಧನ ಪೂಜಾರಿಯ ಬಳಿಕ ಈಗ ಪದ್ಮರಾಜ್ ಗೆ ಅವಕಾಶ ಸಿಕ್ಕಿದೆ.

ಪದ್ಮರಾಜ್, ಗೀತಾ ಶಿವರಾಜಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಚಾರ ಮಾಡುತ್ತೇವೆ. ರಾಜಕೀಯ ಪಕ್ಷವನ್ನ ಪಕ್ಕಕಿಟ್ಟು ಬಿಲ್ಲವ ಸಮಾಜ ಎಂದು ದುಡಿಯುತ್ತೇವೆ. ಯಾರು ಏನು ಬೇಕಾದರೂ ಹೇಳಬಹುದು, ಸಾಮಾಜಿಕ ಜಾಲತಾಣಗಳಲ್ಲಿ ಬರೀಬಹುದು. ನನ್ನ ಕಷ್ಟದ ದಿನಗಳಲ್ಲಿ ಯಾರು ನಿಂತುಕೊಂಡಿದ್ರು ಅವರ ಮಾತನ್ನ ಮಾತ್ರ ಕೇಳುತ್ತೇನೆ ಎಂದು ಹೇಳಿದ್ದಾರೆ.







ಸತ್ಯಜಿತ್ ಸುರತ್ಕಲ್ ದೊಡ್ಡ ಶಕ್ತಿ ಆದರೆ ಅವರ ಜಾತಿ ಸರಿಯಿಲ್ಲ, ಸತ್ಯಜಿತ್ ಬ್ರಾಹ್ಮಣ ಬಿಲ್ಲವ ಒಕ್ಕಲಿಗ ಅಗ್ತಾ ಇದ್ರೆ ಅವಕಾಶ ಸಿಕ್ತಾ ಇತ್ತೋ ಏನು, ದಕ್ಷಿಣ ಕನ್ನಡ ಜಿಲ್ಲೆಯೂ ಸರಿಯಿಲ್ಲ, ನಾಯಕರು ಹೇಳಿದ ಹಾಗೆ ಬಕೆಟ್ ಹಿಡಿದವರಿಗೆ ಮಾತ್ರ ಬೆಲೆಯಿದೆ. ನಾನು ಹುಟ್ಟಿದ್ದು, ಬಿಲ್ಲವ ಸಮಾಜದಲ್ಲಿ ಕೋಟಿ-ಚೆನ್ನಯ್ಯರು ಸ್ವಾಭಿಮಾನವನ್ನ ಕಲಿಸಿದ್ದಾರೆ. ಉಡುಪಿ ಬಿಜೆಪಿ ಟಿಕೆಟ್ ಹಂಚಿಕೆಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ನ ವಿಪಕ್ಷ ಸ್ಥಾನದ ಹುದ್ದೆಯಲ್ಲಿದ್ರೂ ಇನ್ನು ಈ ಸಮಾಜಕ್ಕೆ ಮತ್ತೆ ಆ ಸ್ಥಾನ ಸಿಗಲು ಸಾಧ್ಯ ಇದ್ಯಾ. ಒಂದು ಎಂ ಪಿ ಸೀಟ್ ಗಾಗಿ ಕೋಟ ಎರಡು ಹುದ್ದೆ ಕಳೆದುಕೊಂಡ್ರು. ಕರ್ನಾಟಕ ರಾಜ್ಯದಲ್ಲಿ ಈಗ ಬಿಜೆಪಿ ಇಲ್ಲ, ಬಿ ಎಸ್ಪಿ ಇದೆ. ವಿಧಾನ ಸಭಾ ಚುನಾವಣೆ ತನಕ ಬಿ ಎಲ್ ಪಿ ಇತ್ತು. ಬಿ ಎಲ್ ಸಂತೋಷ್ ಬಣ ಇತ್ತು. ಈಗ ಬಿ ಎಸ್ ಯಡಿಯೂರಪ್ಪ ಬಣದ ಬಿಎಸ್ ಪಿ ಇದೆ.

ಅವತ್ತು ಜನಾರ್ಧನ್ ಪೂಜಾರಿ ಸೋಲಲು ನಾನು ಕಾರಣನಾಗಿದ್ದೆ. ಅವಾಗ ನಮಗೆ ಗೊತ್ತಿರಲಿಲ್ಲ, ನಮ್ಮ ದುರ್ದೈವ ನಮ್ಮನ್ನ ಬಳಸಿ ಜನಾರ್ಧನ ಪೂಜಾರಿಯ ಅವಸನ ಮಾಡಿದ್ರು. ಬ್ರಹ್ಮಕಲಶದಲ್ಲಿ ನಾಲ್ಕು ರೀತಿ ಅಡುಗೆ ನಾಲ್ಕು ರೀತಿ ಊಟ ಹಿಂದುತ್ವದ ಶಾಸಕರ ಅಧ್ಯಕ್ಷತೆಯ ದೇವಸ್ಥಾನದಲ್ಲೂ ಅದೆ ನಡೆಯುತ್ತಿದೆ. ಹಿಂದೂ ಸಮಾಜಕ್ಕೆ ತೊಂದರೆ ಇಲ್ಲ ಅಂತಾ ಹೇಳೋದಿಲ್ಲ. ಬಾಹ್ಯ ಶಕ್ತಿಗಳಿಂದ ಹಿಂದೂ ಸಮಾಜಕ್ಕೆ ತೊಂದರೆಯಿದೆ. ಕೇರಳ, ಮಲ್ಲಾಪುರಂ ನಲ್ಲಿ ಮತಾಂತರ, ಭಯೋತ್ಪಾದನೆ ಯಾಕೆ ಆಯ್ತು ಅಂತಾ ಕೇಳಿದ್ರೆ, ಜಾತಿಯ, ಸ್ಪೃಶ್ಯ, ಅಸ್ಪೃಶ್ಯ ಅನ್ಯಾಯ ಅನಾಚಾರವನ್ನ ಹಿಂದುಳಿದ ವರ್ಗ ಅನುಭವಿಸಿದ ಕಾರಣದಿಂದ ಒಂದಷ್ಟು ಜನ ಮತಾಂತರಗಳು ನಡೆಯುತ್ತೆ. ಹಿಂದುತ್ವದ ಭದ್ರಾಕೋಟೆಯನ್ನ ಇವರೇ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement