Published
9 months agoon
By
Akkare Newsಪುತ್ತೂರು,ಪುತ್ತೂರು ನಗರದ ಹಲವು ಭಾಗಗಳಲ್ಲಿ ನಿರ್ಗತಿಕರು, ಅನಾಥ ವೃದ್ಧರು ವಾಸವಾಗಿದ್ದು ಇವರಿಗೆ ಒಂದು ಶಾಶ್ವತವಾದ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಸಹಭಾಗಿತ್ವದಲ್ಲಿ ನಿರ್ಗತಿಕರ ನಿರ್ಮೂಲನ ಕಾರ್ಯಾಚರಣೆಯು 03-04-2024ರಂದು ನಡೆಯಿತು.
ರಾತ್ರಿ 8 ಗಂಟೆಗೆ ಪ್ರಾರಂಭವಾದ ಕಾರ್ಯಚರಣೆಯು ತಡರಾತ್ರಿ 2 ಗಂಟೆ ತನಕ ನಡೆಯಿತು. ಒಟ್ಟು 12 ಮಂದಿ ನಿರ್ಗತಿಕ ಅನಾಥ ವೃದ್ಧರನ್ನು ರಕ್ಷಣೆ ಮಾಡಲಾಯಿತು.ಅವರನ್ನು ಜಿಡೆಕಲ್ಲು ಸಮೀಪ ಇರುವ ದೀಪಶ್ರೀ ವೃದ್ಧಾಶ್ರಮದಲ್ಲಿ ಸೇರ್ಪಡೆಗೊಳಿಸಲಾಯಿತು.
ಸೇರ್ಪಡೆಗೊಂಡ ನಿರ್ಗತಿಕರ ವಿವರ. ಕೆ ವಿ ಶೆಣೈ ಪೆಟ್ರೋಲ್ ಪಂಪ್ ಬಳಿಯಿಂದ ಒಬ್ಬರು,ದರ್ಬೆ ಬಸ್ಸು ತಂಗು ದಾಣ ದಿಂದ ಮೂವರು, ಸರಕಾರಿ ಬಸ್ಸು ನಿಲ್ದಾಣದಿಂದ ಮೂವರು, ರೈಲ್ವೆ ನಿಲ್ದಾಣದಿಂದ ಒಬ್ಬರು, ಮಹಾಲಿಂಗೇಶ್ವರ ದೇವಸ್ಥಾನದ ಕಂಬಳಗದ್ದೆಯಿಂದ ಒಬ್ಬರು, ಪಡೀಲ್ ನಿಂದ ಇಬ್ಬರು ಹಾಗೂ ಉಪ್ಪಿನಂಗಡಿ ವೆಂಕಟರಮಣ ದೇವಾಲಯದ ಪಕ್ಕದಲ್ಲಿ ಒಬ್ಬರು. ಹೀಗೆ ಒಟ್ಟು 12 ಮಂದಿ ನಿರ್ಗತಿಕ ಅನಾಥರ ರಕ್ಷಣೆ ಮಾಡಿ ಅವರಿಗೆ ಒಂದು ಸೂರನು ಕಲ್ಪಿಸಲಾಗಿದೆ.
ಪುತ್ತೂರು ಉಮೇಶ್ ನಾಯಕ್ ಅವರು ಈ ಮೂಲಕ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಐವತ್ತಕ್ಕೂ ಅಧಿಕ ನಿರ್ಗತಿಕ ವೃದ್ಧರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಪುನರ್ಜೀವನ ನೀಡಿರುತ್ತಾರೆ ಮಾತ್ರವಲ್ಲದೆ ಎರಡು ಹೆಚ್ ಐ ವಿ ಪೀಡಿತ ಮಕ್ಕಳು ಹಾಗೂ ಓರ್ವ ಎಚ್ ಐ ವಿ ಪಿಡಿತ ಮಹಿಳೆಯನ್ನು ಕೂಡ ಹೆಚ್ಐವಿ ಪಡಿತರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು ನಗರ ಪೊಲೀಸ್ ಠಾಣೆ, ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕಾರ ನೀಡಿದೆ. ಕಾರ್ಯಾಚರಣೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಪಶುಪತಿ ಶರ್ಮ, ವಿಶಾಲ್ ಮಂತೇರೂ, ಗೌರವ್ ಭಾರದ್ವಾಜ್, ಶಿಶು ಅಭಿವೃದ್ಧಿ ಇಲಾಖೆಯ ಯೋಜನೆ ನಿರ್ದೇಶಕರಾದ ಶ್ರೀಮತಿ ಮಂಗಳ ಕಾಳೆ, ಶ್ರೀಮತಿ ನಾಗರತ್ನ,ಸಮಾಜ ಕಲ್ಯಾಣ ಇಲಾಖೆಯ ಕಿಶೋರ್, ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸ್ಕರಿಯ ಎಂ.ಎ,ಶರಣ್ ಪಾಟೀಲ್,ಶಿವರಾಜ್,ರೂಪೇಶ್
ಸಂತೋಷ್,ಹೋಂ ಗಾರ್ಡ್ ಸುರೇಶ್ ಸಹಕರಿಸಿದರು. ಉಪ್ಪಿನಂಗಡಿಯ ಕಾರ್ಯಾಚರಣೆಯಲ್ಲಿ ಹಿರಿಯ ಪತ್ರಕರ್ತರಾದ ಉದಯಕುಮಾರ್ ಯುಎಲ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾಲಕ್ಷ್ಮಿ ಪ್ರಭು ಹಾಗೂ ನಾಗೇಶ್ ಪ್ರಭು ಸಹಕರಿಸಿದರು.