ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಪುತ್ತೂರು :ಏ 6 : ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ ಆಯ್ಕೆ

Published

on

ಪುತ್ತೂರು :ಏ 6 : ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ ಅವರು ಚುನಾಯಿತರಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ(ಅವಿರೋಧ ), ಜೊತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಕೆ. ಸವಣೂರು ಚುನಾಯಿತರಾಗಿದ್ದಾರೆ.

ಏ 6ರಂದು ಪುತ್ತೂರು ವಕೀಲರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು . ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಚುನಾವಣೆ ನಡೆದು ಬಳಿಕ ಮತ ಎಣಿಕೆ ನಡೆದಿತ್ತು.





ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಜಗನ್ನಾಥ ರೈ ವಿಜೇತರಾಗಿದ್ದು, ಇನ್ನಿಬ್ಬರು ಸ್ಪರ್ಧಿಗಳು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಆಯ್ಕೆಯಾಗಿದ್ದು, ಎದುರಾಳಿ ವಿಶ್ವನಾಥ ನಂದಿಲ, ಪರಾಭವಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಅವಿರೋಧ ಆಯ್ಕೆಗೊಂಡಿದ್ದು .

ಜತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಆಯ್ಕೆಗೊಂಡಿದ್ದು ಹೀರಾ ಉದಯ್ ಪರಾಭವಗೊಂಡಿದ್ದಾರೆ. ಕೋಶಾಧಿಕಾರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹೇಶ್ ಕೆ. ಸವಣೂರು ಆಯ್ಕೆಗೊಂಡಿದ್ದು, ಚಿದಾನಂದ ರೈ, ಕೊಡಿಂಬಾಡಿ ಪರಾಭವಗೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement