Published
9 months agoon
By
Akkare Newsಮಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ ರದ್ದು ಮಾಡಲಾಗಿದ್ದು, ರೋಡ್ ಶೋ ಮಾತ್ರ ನಡೆಸುವ ಕುರಿತು ತೀರ್ಮಾನ ಮಾಡಲಾಗಿದೆ.
ಎ.14 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮತನಾಡಲಿರುವುದಾಗಿ ಮೊದಲಿಗೆ ನಿಗದಿಯಾಗಿತ್ತು. ಹಾಗಾಗಿ ಮೋದಿ ಸಮಾವೇಶಕ್ಕೆ ಬಿಜೆಪಿ ನಾಯಕರು ಮಂಗಳೂರಿನಲ್ಲಿ ಚಪ್ಪರ ಮುಹೂರ್ತ ಕೂಡಾ ಮಾಡಿದ್ದರು. ಆದರೆ ಇದೀಗ ಕೊನೇ ಕ್ಷಣದಲ್ಲಿ ಮೋದಿ ಸಮಾವೇಶ ರದ್ದು ಮಾಡಿ ಇದೀಗ ಕೇವಲ ರೋಡ್ ಶೋ ಮಾಡುವುದಾಗಿ ನಿರ್ಧಾರ ಮಾಡಲಾಗಿದ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಎಪ್ರಿಲ್ 15 ರಿಂದ 17 ರವರೆಗೆ ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಶಾಸಕರು ಮತ್ತು ಅಭ್ಯರ್ಥಿಗಳು ಸೇರಿ ಎಲ್ಲಾ ಪ್ರಮುಖ ನಾಯಕರು ಮನೆ ಮನೆ ಪ್ರಚಾರ ಮಾಡಲೆಂದು ಭೇಟಿ ನೀಡಲಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಿಂದ ಸಿಟಿಯಲ್ಲಿ ರೋಡ್ ಶೋ ನಡೆಯಲಿದೆ ಎನ್ನಲಾಗಿದೆ. ರೋಡ್ ಶೋ ಮ್ಯಾಪ್ ಇನ್ನಷ್ಟೇ ಸಿದ್ಧಪಡಿಸಬೇಕಾಗಿದ್ದು, ಸಂಜೆ ವೇಳೆಗೆ ಮೋದಿ ರೋಡ್ ಶೋ ಪ್ಲ್ಯಾನ್ ಆಗಲಿದೆ ಎನ್ನಲಾಗುತ್ತಿದೆ.