Published
9 months agoon
By
Akkare Newsಸುಳ್ಯ: ನಾನೋರ್ವ ಹಿಂದೂ. ನನ್ನ ಧರ್ಮದ ತಳಹದಿಯಲ್ಲಿ ಕೆಲಸ ಮಾಡುತ್ತಾ, ಅನೇಕ ಮಂದಿಯ ಕಣ್ಣೀರೊರೆಸುವ ಕೆಲಸ ಮಾಡಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಂತಿಕಲ್ಲಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿಯಾಗಿ, ಕೋಶಾಧಿಕಾರಿಯಾಗಿ 28 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ಇದರ ಜೊತೆಗೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ತಾನು ಬೆಳೆದು ಬಂದ ಧರ್ಮ ತನಗೆ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣಲು ತಿಳಿಸಿದೆ. ಅದರ ಪ್ರಕಾ ಧರ್ಮದ ಕಾರ್ಯ ನಡೆಸಿದ್ದೇನೆ. ನಮ್ಮ ಸಂವಿರ ಆಶಯದಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬಾಳಲು ಬೇಕಾದ ವಾತಾವರಣವನ್ನು ಕಲ್ಪಿಸಿಕೊಡಲು ಶ್ರಮಿಸಲಾಗುವುದು ಎಂದರು.
ಸಮಾಜ ಉತ್ತಮ ಅಭಿವೃದ್ಧಿ ಆಗಬೇಕು. ಯುವಕರಿಗೆ ಉತ್ತಮ ಶಿಕ್ಷಣ ಸಿಗಬೇಕು. ಜನರಿಗೆ ಅವರ ಊರಿನಲ್ಲೇ ಆರೋಗ್ಯ ಸೇವೆ ಸಿಗಬೇಕು. ಜಿಲ್ಲಾ ಕೇಂದ್ರಕ್ಕೆ ಓಡಿಕೊಂಡು ಬರುವಂತೆ ಆಗಬಾರದು. ಈ ಎಲ್ಲಾ ಆಶಯದೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ. ಯಾವುದೇ ಕಾರಣಕ್ಕೂ ನಮ್ಮ ಕಾರ್ಯಕರ್ತರು, ಜನರು ತಲೆತಗ್ಗಿಸುವ ಕೆಲಸವನ್ನು ತಾನೆಂದು ಮಾಡುವುದಿಲ್ಲ ಎಂದು ಪದ್ಮರಾಜ್ ಭರವಸೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಸರ್ಕಾರದ ಬಗ್ಗೆ ಮಾಡಿದರೆ ಅವರಿಗೆ ದೇಶದ್ರೋಹದ ಪಟ್ಟಕಟ್ಟಿ ಅವರನ್ನು ಜೈಲಿಗೆ ದೂಡುವ ಕೆಲಸ ಆಗುತ್ತಿದೆ.ಆದರೆ ಕಾಂಗ್ರೆಸ್ ಸರ್ಕಾರ ಎಂದೂ ಜನವಿರೋಧಿ ಕೆಲಸ ಮಾಡಿಲ್ಲ. ಜನಪರ ಕೆಲಸಗಳನ್ನೇ ಮಾಡಿಕೊಂಡು ಬಂದಿದೆ. ಅಭಿವೃದ್ಧಿ ಕೆಲಸಗಳೇ ನಮ್ಮ ಶಕ್ತಿ ಎಂದರು.
ಮಈ ವೇಳೆ ಮಮತಾ ಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಪ್ಪಂಗಾಯ, ಟಿ.ಎಂ. ಶಹೀದ್, ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಂ, ಜಿ. ಕೃಷ್ಣಪ್ಪ, ಡಾ. ರಘು ಅಶೋಕ್ ಎಡಮಲೆ, ಹಮೀದ್ ಕುತ್ತಮೊಟ್ಟೆ, ಸಂಶುದ್ದೀನ್, ಸುಜಯ ಕೃಷ್ಣ, ರಾಧಾಕೃಷ್ಣ ಬೊಳ್ಳರು, ಇಸಾಕ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.