ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೆದಿಲದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಗ್ಯಾರಂಟಿಯಿಂದ ಪ್ರತೀ ಕುಟುಂಬಕ್ಕೆ 30 ಸಾವಿರ ಬಂದಿದೆ: ಅಶೋಕ್ ರೈPublished
8 months agoon
By
Akkare Newsಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಯಿಂದ ಅರ್ಹ ಪ್ರತೀ ಕುಟುಂಬಕ್ಕೆ 30 ಸಾವಿರ ಹಣ ಬಂದಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಇದುವರೆಗೆ ರಾಜ್ಯ ಮತ್ತು ದೇಶವನ್ನಾಳಿದ ಯಾವುದೇ ಸರಕಾರ ಜನರ ಖಾತೆಗೆ ಹಣ ನೀಡಿಲ್ಲ. ರಾಜ್ಯದ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಯಿಂದ ಅನೇಕ ಕುಟುಂಬಗಳಿಗೆ ನೆಮ್ಮದಿಯ ಬದುಕು ನೀಡಿದೆ. ಮಹಿಳೆ ಸ್ವಾವವಲಂಬಿ ಬದುಕು ಕಟ್ಟಿದ್ದಾರೆ. ತೀರಾ ಬಡತನದಲ್ಲಿದ್ದ ಕುಟುಂಬಗಳು ಈಗ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದ ಪ್ರತೀಯೊಬ್ಬ ಮಹಿಳೆಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯ ಸಂದರ್ಬದಲ್ಲಿ ಹಿಂದುತ್ಬ ಎಂದು ಹೇಳಿ ಜನರ ಮನಸ್ಸನ್ನು ಕೆರಳಿಸಿ ಅಧಿಕಾರಕ್ಕೆ ಬರುವ ಬಿಜೆಪಿ ಜನತೆಗೆ ಏನು ಕೊಟ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿಯದ್ದು ಹೊಡಿಬಡಿ ಸಂಸ್ಕೃತಿಯಾಗಿದೆ , ಬಿಜೆಪಿಗೆ ಅಭಿವೃದ್ದಿ ಬೇಕಾಗಿಲ್ಲ,ಜನರ ಭಾವನೆಯನ್ನು ಕೆರಳಿಸಿ, ಧರ್ಮ, ದೇವರ ಹೆಸರಿನಲ್ಲಿ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ ವಾರ್ಷಿಕ ಒಂದುಲಕ್ಷ ಹಣ ನೀಡಲಿದ್ದು .ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮತದಾರರು ಸರಕಾರಕ್ಕೆ,ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಏನೂ ಮಾಡಿಲ್ವ?
ಕಾಂಗ್ರೆಸ್ ಈ ದೇಶವನ್ನು 60 ವರ್ಷ ಆಳಿದರೂ ಏನೂ ಅಭಿವೃದ್ದಿ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ ಈ ದೇಶದಲ್ಲಿರುವ ರಸ್ತೆಗಳು, ರೈಲ್ವೇ ಸಂಪರ್ಕಗಳು, ದೊಡ್ಡ ಉದ್ಯಮಗಳು, ವಿಮಾನ ನಿಲ್ದಾಣ ಇದೆಲ್ಲವನ್ನೂ ಮಾಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಕಳೆದ 10 ವರ್ಷಗಳಿಂದ ಆಳಿದವರು ಏನುಮಾಡಿದ್ದಾರೆ ಎಂಬುದನ್ನು ಬಿಜೆಪಿ ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮಾಡಿದ್ದನ್ನು ಬಿಜೆಪಿಮಾರಾಟ ಮಾಡುತ್ತಿದೆ:
ಈದೇಶದಲ್ಲಿ ಕಾಂಗ್ರೆಸ್ ಎಲ್ಲವನ್ನೂ ಮಾಡಿದೆ ಕಾಂಗ್ರೆಸ್ ಮಾಡಿದ್ದನ್ನು ಬಿಜೆಪಿ ಮಾರಾಟ ಮಾಡುತ್ತಿದೆ. ದೇಶದ ಆರ್ಥಿಕತೆಯನ್ನುಮೇಲ್ಪಂಕ್ತಿಗೆ ತಂದವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು. ಕಳೆದ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ. ಬೆಲೆ ಏರಿಕೆ ಯಿಂದ ಜನ ತತ್ತರಿಸಿದ್ದಾರೆ. ರೈತರು,ಬಡವರುಕಷ್ಟದಲ್ಲಿದ್ದಾರೆ ಇದೆಲ್ಲವನ್ನೂ ಪ್ರತೀಯೊಬ್ಬರು ಗಮನಿಸಬೇಕು ಎಂದು ಶಾಸಕರು ಹೇಳಿದರು.
ಗ್ಯಾರಂಟಿ ಬಂದ್ ಆದರೆ ಏನಾಗಬಹುದು:
ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ನಿಂತು ಹೋದರೆ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಪ್ರತೀಯೊಬ್ಬ ಮಹಿಳೆಯರು ಚಿಂತಿಸಬೇಕು. ಯಾರದ್ದೋ ಮಾತಿಗೆ ಮರುಳಾಗಿ ಯಾರೂ ಕಾಂಗ್ರೆಸ್ ಬೆಂಬಲಿಸುವುದನ್ನು ಮರೆಯಬೇಡಿ. ಗ್ಯಾರಂಟಿ ಗೆ ಶಕ್ತಿ ನೀಡಲು ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿದ ಶಾಸಕರು ನಮಗೆ ಬದುಕು ನೀಡಿದ ಗ್ಯಾರಂಟಿಗೆ ಬೆಂಬಲ ನೀಡಿ ,ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಗೃಹಲಕ್ಷ್ಮಿ ಯೋಜನೆಯನ್ನು ನಂಬಿ ಅನೇಕ ಮಹಿಳೆಯರು ಸ್ಕೀಂ ಗೆ ಸೇರಿದ್ದಾರೆ. ಗ್ಯಾರಂಟಿ ರದ್ದಾದರೆ ಏನಾಗಬಹುದು ಎಂಬುದನ್ನು ಚಿಂತಿಸಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಪುಡಾ ಅಧ್ಯಕ್ಷರಾದ ಭಾಸ್ಕರ್ ಕೋಡಿಂಬಾಳ, ಡಿಸಿಸಿ ಕಾರದಯದರ್ಶಿ ಮುರಳೀದರ್ ರೈ ಮಟಂತಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಣರಾದ ಉಮಾನಾಥ ಶೆಟ್ಟಿ ಪೆರ್ನೆ, ಉಸ್ತುವಾರಿಗಳಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ,ಪ್ರವೀಣ್ ಚಂದ್ರ ಆಳ್ವ, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ಮೊದಲಾದವರು ಇದ್ದರು. ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಸ್ವಾಗತಿಸಿ ವಂದಿಸಿದರು.