ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರು: ತಂಬುತ್ತಡ್ಕದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗಾಗಿ ಫೀಲ್ಡಿಗೆ ಬರುತ್ತಿದ್ದು ಇದು ಗ್ಯಾರಂಟಿ ಪ್ರಭಾವ: ಎಂ ಬಿ ವಿಶ್ವನಾಥ ರೈPublished
8 months agoon
By
Akkare Newsಪುತ್ತೂರು: ಕಳೆದ ಚುನಾವಣೆಯಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದ ಅನೇಕ ಮಂದಿ ಈ ಬಾರಿ ನಮ್ಮೊಂದಿಗೆ ಫೀಲ್ಡಿಗೆ ಬರುತ್ತಿದ್ದು,ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯನ್ನು ಜನ ಬೆಂಬಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದರು.
ಅವರು ತಂಬುತ್ತಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಬಡವರಿಗೆ ಸಹಾಯ ಮಾಡುವುದು ಬಿಜೆಪಿಗೆ ಬೇಕಾಗಿಲ್ಲ. ಗ್ಯಾರಂಟಿ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತಲೇ ಬರುತ್ತಿದೆ, ಸರಕಾರ ಜನತೆಗೆ ಬಿಟ್ಟಿ ಭಾಗ್ಯ ಕೊಡುತ್ತಿಲ್ಲ, ನೀವು ಕಟ್ಟಿದ ತೆರಿಗೆಯ ಹಣವನ್ನೇ ನಿಮಗೆ ಕೊಡುವ ಕೆಲಸ ಕಾಂಗ್ರೆಸ್ ಮಾಡಿದೆ. ಗ್ಯಾರಂಟಿ ಯೋಜನೆ ಕಾಂಗ್ರೆಸ್ ಯೋಜನೆಯಾಗಿದೆ ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ದೊರೆಯುವುದಿಲ್ಲ. ಬಡವರ ಭಾಗ್ಯದ ಬಾಗಿಲು ತೆರೆಯಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎಂದು ಹೇಳಿದರು.
15 ಲಕ್ಷ ಕೊಡುವುದಾಗಿ ಮೋದಿ ಹೇಳಿದ್ರು, ಜನ ನಂಬಿದ್ರು ಹತ್ತು ವರ್ಷ ಕಳೆದರೂ ನಯಾ ಪೈಸೆ ಬಂದಿಲ್ಲ. ಜನರನ್ನು ಆಸೆಯಲ್ಲಿ ತೇಲಿಸಿಬಿಡುವ ಮೂಲಕ ವಂಚನೆ ಮಾಡುವುದೇ ಅವರ ಕಾಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ಅಶೋಕ್ ರೈ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್,ಬ್ಲಾಕ್ ಉಪಾಧ್ಯಕ್ಷ ಮೌರಿಶ್ ಮಸ್ಕರೇನಸ್, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕಡಿಸಿಸಿ ಕಾರ್ಯದರ್ಶಿ ಮುರಳೀಧರ್ ರೈಮಟಂತಬೆಟ್ಟು, ಹಬೀಬ್ ಕಣ್ಣೂರು, ಸಾಮಾಜಿಕ ಜಾಲ ತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್, ಮಹೇಶ್ ರೈ ಅಂಕೊತ್ತಿಮಾರ್,ಹರೀಶ್ ಕೋಟ್ಯಾನ್,ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ, ಭಾಸ್ಕರ ಕರ್ಕೆರ ಉಪಸ್ಥಿತರಿದ್ದರು. ಕೆ ಪಿ ಆಳ್ವ ಸ್ವಾಗತಿಸಿ ಗ್ರಾಪಂ ಸದಸ್ಯ ಸತೀಶ್ ವಂದಿಸಿದರು.