Published
8 months agoon
By
Akkare Newsಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್ ಮಾರಾಟದಲ್ಲೂ ಹೆಚ್ಚಳವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ತಣ್ಣನೆಯ ಬಿಯರ್ ಖರೀದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ.
ಏ.1 ರಿಂದ 11 ರವರೆಗೂ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್ ವಿವಿಧ ಬ್ರಾಂಡ್ನ ಬಿಯರ್ ಮಾರಾಟವಾಗಿದೆ. 2021ರಲ್ಲಿ ಇದೇ ಅವಧಿಯಲ್ಲಿ 8.83 ಲಕ್ಷ ಲೀಟರ್, 2022ರಲ್ಲಿ 9.20 ಲಕ್ಷ ಲೀಟರ್, 2023ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಆದರೆ ಈ ಬಾರಿ ಬಿಸಿನ ಝಳ ಹೆಚ್ಚಾಗಿರುವುದರಿಂದ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅಧಿಕ ಬಿಯರ್ ಬಿಕರಿಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಅಧಿಕ ಸೇಲ್ ಆಗಿದೆ. ಸಾಮಾನ್ಯವಾಗಿ ದಿನಕ್ಕೆ ಸುಮಾರು ಒಂದು ಲಕ್ಷ ಲೀಟರ್ ಬಿಯರ್ ರಾಜ್ಯಾದ್ಯಂತ ಮಾರಾಟವಾಗುತ್ತದೆ. ಈ ಬಾರಿ ಬಿಸಿಲು ಅಧಿಕವಾಗಿರುವುದರಿಂದ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ.