ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮಂಗಳೂರು ಪ್ರಧಾನ ಮಂತ್ರಿ ರೋಡ್ ಶೋ ಹಿನ್ನೆಲೆ ನಾಳೆ ದಿನಾಂಕ (14) ವಾಹನ ಸಂಚಾರ ಬದಲಾವಣೆ ಇಲ್ಲಿದೆ ಫುಲ್ ಡೀಟೇಲ್ ...Published
8 months agoon
By
Akkare Newsಮಂಗಳೂರು , ಎ.12: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಂಗಳೂರು ನಗರ ದಕ್ಷಿಣದಲ್ಲಿ ಒಟ್ಟು 2,52, 583 ಮಂದಿ ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದಾರೆ. ಈ ಪೈಕಿ ಪುರುಷರು 1,20, 575, ಮಹಿಳೆಯರು 1,31, 958 ಮತ್ತು ಇತರ ಮತದಾರರು 50 ಎಂದು ಸಹಾಯಕ ಚುನಾವಣಾಧಿಕಾರಿ ಎಂ. ಗಿರೀಶ್ ನಂದನ್ ತಿಳಿಸಿದ್ದಾರೆ.
ಮಂಗಳೂರು ನಗರ ದಕ್ಷಿಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ 85ವರ್ಷಕ್ಕಿಂತ ಮೇಲ್ಪಟ್ಟ 1,310 ಮಂದಿ ಹಾಗೂ ಪಿಡಬ್ಲ್ಯುಡಿ (ವಿಕಲಚೇತನ) 91 ಮಂದಿ ಸೇರಿದಂತೆ 1,401 ಮಂದಿ ಮನೆಯಲ್ಲಿಯೇ ಮತದಾನ ಮಾಡಲು ಆಸಕ್ತಿ ವಹಿಸಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಗಿರೀಶ್ ನಂದನ್ ಮಾಹಿತಿ ನೀಡಿದರು.
ಮಂಗಳೂರು ನಗರ ದಕ್ಷಿಣದ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ನೋಂದಾಯಿಸಿರುವ 85ಕ್ಕಿಂತ ಮೇಲ್ಪಟ್ಟ ಮತದಾರರಿಗೆ ಹಾಗೂ ಪಿಡಬ್ಲ್ಯುಡಿ ಮತದಾರರಿಗೆ ಎ. 15 ಮತ್ತು 16ರಂದು ಮನೆಯಲ್ಲಿಯೇ ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ರೀತಿ ನೋಂದಾಯಿಸಿಕೊಂಡಿರುವ ಮತದಾರರು ನಿಗದಿತ ದಿನ ಮತಗಟ್ಟೆ ಅಧಿಕಾರಿಗಳು ಮತಪೆಟ್ಟಿಗೆಯೊಂದಿಗೆ ಬರುವಾಗ ಮನೆಯಲ್ಲಿದ್ದುಕೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ವಿನಂತಿಸಿದ ಗಿರೀಶ್ ನಂದನ್ ಅವರು ಒಂದು ವೇಳೆ ಎ.15 ಮತ್ತು 16ರಂದು ಮತಚಲಾಯಿಸಲು ಸಾಧ್ಯವಾಗದೆ ಇರುವ ಮಂದಿಗೆ ಎ.17ರಂದು ಅವಕಾಶ ನೀಡಲಾಗುವುದು ಎಂದರು.
ಕ್ಷೇತ್ರದಲ್ಲಿ 249 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ 2 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿ ಸಲಾಗಿದೆ. 99ನೇ ಮತಗಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಸ್ಬಾ ಬೆಂಗ್ರೆ ಮತ್ತು 197ನೇ ಮತಗಟ್ಟೆ ಅಂಗನ ವಾಡಿ ಕೇಂದ್ರ ವೀರನಗರ ಇವೆರಡು ಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ಹೇಳಿದರು.
ಮತಗಟ್ಟೆಗೆ ಮತದಾನ ಮಾಡಲು ಆಗಮಿಸುವ ಮತದಾರರಿಗೆ ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಸ್ಥಳೀಯ ಭಾಷೆ ಗೊತ್ತಿಲ್ಲದ ಬ್ಯಾಂಕ್ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸರಕಾರಿ ನೌಕರರ ಕೊರತೆಯ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಳೆದ ಚುನಾವಣೆಯಲ್ಲೂ ಇವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊ ಳ್ಳಲಾಗಿತ್ತು. ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಬ್ಯಾಂಕ್ ನೌಕರರಿಗೆ ಚುನಾವಣೆಗೆ ಸಂಬಂಧಿಸಿ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಗಿರೀಶ್ ನಂದನ್ ಸ್ಪಷ್ಟಪಡಿಸಿದರು.ಸಹಾಯಕ ಚುನಾವಣಾ ನೋಂದಣಾಧಿಕಾರಿ ದೇವೇಂದ್ರಪ್ಪ ಪರಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.