Published
8 months agoon
By
Akkare Newsಕಡಬ: ಬಿಸಿಲ ಬೇಗೆಯಿಂದ ತತ್ತರಿಸಿದ ದ.ಕ ಜಿಲ್ಲೆಗೆ ಇಂದು ಸಂಜೆ ವೇಳೆ ಸುರಿದು ಮಳೆ ತಂಪೆರೆದಿದೆ.
ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ವಿವಿದೆಡೆ ಶನಿವಾರ ಸಂಜೆ 7 ಗಂಟೆ ಬಳಿಕ ಗಾಳಿ, ಗುಡುಗು ಸಹಿತ ಮಳೆಯಾಗಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯ, ಪಂಜ, ಗುಂಡ್ಯ ವ್ಯಾಪ್ತಿಯಲ್ಲಿ ಕೆಲ ನಿಮಿಷ ಮಳೆಯಾಗಿದೆ.
ಸಂಜೆ ವೇಳೆ ತಂಪು ಗಾಳಿ ಬೀಸುತ್ತಿದ್ದು, ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ತಂಪಿನ ವಾತಾವರಣ ಸೃಷ್ಟಿಯಾಗಿದೆ.