ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕಾಡುಕೋಣ ಹತ್ಯೆ ಇಬ್ಬರು ಆರೋಪಿಗಳ ಬಂಧನ ಉಳಿದವರಿಗಾಗಿ ಶೋಧ

Published

on

ಕಾಡುಕೋಣವನ್ನು ಗುಂಡಿಕ್ಕಿ ಕೊಂದು ಮಾಂಸವನಾಗಿಸಿ ಕತ್ತರಿಸಿ ಸಾಗಿಸಿದ ಆರೋಪದಡಿ ತಲೆಮರಿಸಿಕೊಂಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.

ಮಡಿಕೇರಿ ತಾಲೂಕಿನ ಕುಂಚಿಲ ಗ್ರಾಮದ ಮಹಮ್ಮದ್ ಜಬೀರ್( 29) ಹಾಗೂ ನೌಫಲ್ (24) ಬಂದಿತ ಆರೋಪಿಗಳಾಗಿದ್ದರೆ ಇವರ ಬಳಿಯಿಂದ ಒಂದು ಓಮಿನಿ ಕಾರು ಮತ್ತು ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಾಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳು ತಲೆಮರಿಸಿಕೊಂಡಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆಯನ್ನು ಚುರುಕು ಗೊಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ ಕುಶಾಲನಗರ ವಲಯ ವ್ಯಾಪ್ತಿಯ ಮಾಲ್ತಾರೆ ಗಸ್ತಿನ ಪಿರಿಯಾಪಟ್ಟಣ ಸಿದ್ದಾಪುರ ರಸ್ತೆ ಹಂಚಿನಲ್ಲಿ ಕಾಡುಕೋಣವೊoದನ್ನು ಗುಂಡಿಕ್ಕಿಕೊಂಡು ಮಾಂಸವನ್ನಾಗಿ ಕತ್ತರಿಸಿಕೊಂಡು ಸಾಗಿಸಿರುವ ಸಂಬಂಧ ಮಾ.14 ರಂದು ಪ್ರಕರಣ ದಾಖಲಾಗಿತ್ತು.







ಅಲ್ಲದೆ ಮಾ 24ರಂದು ಆನೆ ಚೌಕೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಕಾಡು ಕೋಣವನ್ನು ಅತ್ತೆ ಮಾಡಿ ಮಾಂಸ ಮಾಡಿ ಸಾಗಿಸಿದ ಸಂಬಂಧ ಪ್ರಕರಣ ದಾಖಲಾಗಿತ್ತು ಈ ಎರಡು ಪ್ರಕರಣಗಳಲ್ಲಿ ತಲೆಮರಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಮಡಿಕೇರಿ ವಿಭಾಗದ ಕರಿ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದರು ತನಿಖಾ ತಂಡಕ್ಕೆ ದೊರೆತ ಖಚಿತ ಮಾಹಿತಿ ಅನ್ವಯ ಇಬ್ಬರು ಪಿಗಳನ್ನು ಬಂಧಿಸಿ ವಿರಾಜಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement