Published
8 months agoon
By
Akkare Newsಪುತ್ತೂರು: ಬಿಜೆಪಿ ಗೆಲ್ಲದೇ ಇದ್ದರೆ ಕೊರಗಜ್ಜನಿಗೆ ನ್ಯಾಯ ಕೊಡಿಸುವುದಾಗಿಯೂ, ಇತರೆ ದೈವ, ದೇವರುಗಳಿಗೆ ನ್ಯಾಯ ಕೊಡಿಸುವುದಾಗಿ ಬಿಜೆಪಿಯವರು ಹೇಳುತ್ತಿದ್ದು ಕೊರಗಜ್ಜನಿಗೆ ನ್ಯಾಯ ಕೊಡಿಸಲು ಬಿಜೆಪಿಯವರಿಗೆ ಸಾಧ್ಯವಿಲ್ಲ ಯಾಕೆಂದರೆ ಕೊರಗಜ್ಜನೇ ನಮಗೆಲ್ಲ ನ್ಯಾಯ ಕೊಡಿಸುವವರಾಗಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಕೊಡಿಪ್ಪಾಡಿಯಲ್ಲಿ ವಲಯ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಚುನಾವಣೆ ಬಂದಾಗ ಬಿಜೆಪಿಗೆ ಧರ್ಮ,. ದೇವರು, ದೈವಗಳ ನೆನಪಾಗುತ್ತದೆ. ದೈವ, ದೇವರಿಗೆ ನ್ಯಾಯ ಕೊಡಿಸಲು ಬಿಜೆಪಿಯವರಿಗೆ ಸಾಧ್ಯವಿದೆಯೇ? ರಾಜಕೀಯಕ್ಕಾಗಿ ದೈವಗಳ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು ಅದು ತಪ್ಪು ಎಂದು ಹೇಳಿದರು.
ನಕಲಿ ಹಿಂದುತ್ವದ ಮೂಲಕ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಬಿಜೆಪಿಗೆ ದೈವ , ದೇವರೇ ತಕ್ಕ ಬುದ್ದಿಯನ್ನು ಕರುಣಿಸಲಿ. ನಾವು ಸಂಕಷ್ಟವಾದಾಗ, ಸಮಸ್ಯೆಯಲ್ಲಿ ಸಿಲುಕಿದಾಗ ನ್ಯಾಯಕ್ಕಾಗಿ ನಾವು ದೈವ, ದೇವರುಗಳ ಬಳಿ ನ್ಯಾಯಕ್ಕೆ ಹೋಗುತ್ತೇವೆ ಆದರೆ ಬಿಜೆಪಿಯವರ ಸಿದ್ದಾಂತವೇ ಬೇರೆಯಾಗಿದೆ ಎಂದು ಲೇವಡಿ ಮಾಡಿದರು.