ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಎ.15-17: ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಮನೆಯಲ್ಲೇ ಮತದಾನ

Published

on

ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರದಲ್ಲಿ 6,053 ಹಿರಿಯ ನಾಗರಿಕರು ಹಾಗೂ 1,957 ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಎಂ.ಪಿ .ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತೀಯ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ 6,053 ಮತದಾರರಿಗೆ ಹಾಗೂ ಶೇ.40ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿರುವ 1,957 ಮತದಾರರಿಗೆ ಮನೆಮನೆ ಭೇಟಿ ಮಾಡಿ ಅಂಚೆ ಮತಪತ್ರದ ಮೂಲಕ ಮತದಾನ ಸೌಲಭ್ಯ ಒದಗಿಸಿದೆ ಎಂದರು.

ಅಂಚೆ ಮತಪತ್ರಗಳ ವಿತರಣೆಗಾಗಿ ಈಗಾಗಲೇ ಪೋಲಿಂಗ್ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಈ ತಂಡಗಳು ಕಾರ್ಯನಿವಹಿಸುವ ಬಗ್ಗೆ ನಿಗದಿಪಡಿಸಲಾದ ದಿನಾಂಕ, ಸಮಯದ ಬಗ್ಗೆ ಡಿಸಿ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಅಂಗವೈಕಲ್ಯ ಹೊಂದಿರುವ ದಿವ್ಯಾಂಗರ ಸಹಿತ 8,010 ಮತದಾರರು ಅಂಚೆ ಮತಪತ್ರದ ಮೂಲಕ ಮತದಾನದ ಸೌಲಭ್ಯ ಪಡೆಯಲಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಎ.15ರಿಂದ 17ರವರೆಗೆ 975 ಮತದಾರರಿಗೆ ಮತದಾನದ ಸೌಲಭ್ಯ ನೀಡಲು 25 ತಂಡಗಳನ್ನು ರಚಿಸಲಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತದಲ್ಲಿ ಎ.15ರಿಂದ 16ರವರೆಗೆ ತನಕ 812 ಮತದಾರರಿಗೆ ಮತದಾನ ಸೌಲಭ್ಯ ನೀಡಲು 26 ತಂಡಗಳನ್ನು ರಚಿಸಲಾಗಿದೆ. ಮಂಗಳೂರು ವಿಧಾನಸಭಾ ಕ್ಷೇತದಲ್ಲಿ ಎ.15ರಿಂದ 16ರವರೆಗೆ 515 ಮತದಾರರಿಗೆ ಮತದಾನ ಸೌಲಭ್ಯ ನೀಡಲು 21 ತಂಡಗಳನ್ನು ರಚಿಸಲಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತದಲ್ಲಿ ಎ.15ರಿಂದ 17ರವರೆಗೆ 1,401 ಮತದಾನದ ಸೌಲಭ್ಯ ನೀಡಲು 28 ತಂಡಗಳನ್ನು ರಚಿಸಲಾಗಿದೆ.







ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎ.15ರಿಂದ 16ರವರೆಗೆ 976 ಮತದಾರರಿಗೆ ಮತದಾನ ಸೌಲಭ್ಯ ನೀಡಲು 26 ತಂಡಗಳನ್ನು ರಚಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎ.15ರಿಂದ 17ರವರೆಗೆ 1,127 ಮತದಾರರಿಗೆ ಮತದಾನ ಸೌಲಭ್ಯ ನೀಡಲು 20 ತಂಡಗಳನ್ನು ರಚಿಸಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತದಲ್ಲಿ ಎ.15ರಿಂದ 16ರವರೆಗೆ 1,038 ಮತದಾರರಿಗೆ ಮತದಾನದ ಸೌಲಭ್ಯ ನೀಡಲು 23 ತಂಡಗಳನ್ನು ರಚಿಸಲಾಗಿದೆ. ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಎ.15ರಿಂದ 17ರವರೆಗೆ 1,166 ಮತದಾರರಿಗೆ ಮತದಾನದ ಸೌಲಭ್ಯ ನೀಡಲು 22 ತಂಡಗಳನ್ನು ರಚಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಅಂಚೆ ಮತಪತ್ರ ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement