Published
8 months agoon
By
Akkare Newsಪುತ್ತೂರು : ತ್ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ ಏಳು ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಪುಣಚ ಗ್ರಾಮದ ಬರೆಂಜ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿ ಎಂಬಲ್ಲಿ ಸೋಮವಾರ ನಡೆದಿದೆ.
ಈ ಸೇತುವೆಯ ಕೊನೆಯ ಹಂತದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕಾಂಕ್ರಿಟ್ ಕಾಮಗಾರಿಗಾಗಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ಪ್ಲೇಟ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದುಬಿದ್ದಿದೆ.
ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಏಳು ಮಂದಿ ಅದರಡಿಯಲ್ಲಿ ಸಿಲುಕಿದ್ದರು. ಸ್ಥಳದಲ್ಲಿದ್ದ ಇತರರು ಕೂಡಲೇ ಅವರನ್ನು ರಕ್ಷಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.