ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸುದ್ದಿಗೋಷ್ಠಿ ಸ್ಥಳೀಯ
ಗೌಡ ಸಮಾಜದ ಮುಗ್ಧ ಹೆಣ್ಣು ಮಗಳು 'ಸೌಜನ್ಯ' ಳಿಗೆ ಸಿಗದ ನ್ಯಾಯದ ವಿರುದ್ದ ಒಕ್ಕಲಿಗರೆಲ್ಲರೂ ಒಗ್ಗಟ್ಟಾಗಿ 'ನೋಟ' ಅಭಿಯಾನ ವನ್ನು ಬೆಂಬಲಿಸಲು ಕರೆ : ಭರತ್ ಕೆಮ್ಮಾರPublished
8 months agoon
By
Akkare Newsಸೌಜನ್ಯ ನ್ಯಾಯಪರ ಹೋರಾಟ ಸಮಿತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆ ಇದರ ವತಿಯಿಂದ 15ನೇ ತಾರೀಖಿನ ಸೋಮವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರು ತಾಲೂಕು ಹೋರಾಟ ಸಮಿತಿಯ ಪ್ರಮುಖರಾದ ಭರತ್ ಕೆಮ್ಮಾರ ಕೊಳ್ತಿಗೆ ಇವರು ಮಾತನಾಡಿ ನಮ್ಮ ಮನೆಮಗಳು ಸೌಜನ್ಯ,
ಆ ಮುಗ್ಧ ಮಗುವಿನ ಅಂತ್ಯದ ಕರಾಳ ದಿನವನ್ನು ಸ್ಮರಿಸುತ್ತ ಎಲ್ಲರೂ ಈ ಬಾರಿ ನೋಟ ಕ್ಕೆ ಮತದಾನ ಮಾಡಿ, ಒಕ್ಕಲಿಗ ಸಮುದಾಯದ ಎಲ್ಲಾ ಬಂಧು ಮಿತ್ರರು ಈ ಅಭಿಯಾನಕ್ಕೆ ವಿಶೇಷವಾದ ಬೆಂಬಲವನ್ನು ನೀಡಿ ನಮ್ಮ ಸಮಾಜದ ಹೆಣ್ಣುಮಗಳಿಗಾದ ಅನ್ಯಾಯದ ವಿರುದ್ಧ ಒಕ್ಕಲಿಗ ಸಮುದಾಯವೇ ಈ ದುಷ್ಕೃತ್ಯವನ್ನು ಖಂಡಿಸಿ ಈ ಬಾರಿ ನೋಟ ಮತದಾನವನ್ನು ಮಾಡುವ ಮೂಲಕ ಸಮಾಜಕ್ಕಾದ ಅನ್ಯಾಯದ ವಿರುದ್ಧ ಧ್ವನಿ ಯಾಗಬೇಕು ಎಂದು ವಿನಂತಿಸಿದ್ದಾರೆ.