ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಪದ್ಮರಾಜ್ ಸ್ಪರ್ಧೆ ವಕೀಲ ಸಮುದಾಯಕ್ಕೆ ನೀಡಿದ ಗೌರವ ಪುತ್ತೂರು ವಕೀಲರ ಜೊತೆ ಸಮಾಲೋಚನಾ ಸಭೆ ನೆಡೆಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

Published

on

ಪುತ್ತೂರು: ಸಂವಿಧಾನದ ಆಶಯಗಳನ್ನು ರಕ್ಷಿಸುವಲ್ಲಿ ವಕೀಲರ ಪಾತ್ರ ಮಹತ್ತರ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.ಪುತ್ತೂರು ಲಯನ್ಲ್ ಬ್ಲಬ್ ನಲ್ಲಿ ನಡೆದ ವಕೀಲರ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ ಹಿಂದುಳಿದಿದೆ. ಕಳೆದು ಹೋಗಿರುವ ಸಾಮರಸ್ಯದ ವೈಭವವನ್ನು ಹಿಂದಿರುಗಿ ತರಬೇಕು. ಇದಕ್ಕಾಗಿ ಪ್ರಜಾಪಭುತ್ವ, ಸಂವಿಧಾನವನ್ನು ರಕ್ಷಿಸುವ ಅಗತ್ಯವಿದೆ. ಮೂರ್ಖರಿಂದ ಈ ದೇಶ ಹಾಳಾಗುತ್ತಿಲ್ಲ. ಜ್ಞಾನಿಗಳು ಸುಮ್ಮನೆ ಕುಳಿತುಕೊಂಡಿರುವುದರಿಂದ ಹಾಳಾಗಿದೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ವಕೀಲರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸುವಂತೆ ವಿನಂತಿ ಮಾಡಿಕೊಂಡರು.

ಜನಪ್ರತಿನಿಧಿಯಾಗಿ ಅಶೋಕ್ ಕುಮಾರ್ ರೈ ಉತ್ತಮ ಕೆಲಸ ಮಾಡಿದ್ದಾರೆ. ವಕೀಲ ಸಂಘದ ಬೇಡಿಕೆಯಾದ ಸೋಲಾರ್ ಪ್ಯಾನೆಲ್ ಅನ್ನು ನೀಡಲು ಅಗತ್ಯವಿರುವ 50 ಲಕ್ಷ ರೂ.ವನ್ನು ಮುಖ್ಯಮಂತ್ರಿ ಜೊತೆ ಮಾತನಾಡಿ ಅನುದಾನ ತರಿಸಿಕೊಳ್ಳಲು ಅವರಿಗೆ ಸಾಧ್ಯ ಎಂದರು.ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವಕೀಲರು ಮನಸ್ಸು ಮಾಡಿದರೆ ದೇಶದಿಂದ ಭ್ರಷ್ಟಾಚಾರವನ್ನು ಕಿತ್ತು ಹಾಕಬಹುದು. ಆದ್ದರಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಕಿತ್ತಾಡದೇ, ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ ಎಂದರು.

ಅವಕಾಶ ನೀಡಿದರೆ ಎಲ್ಲರೂ ಉತ್ತಮ ಕೆಲಸ ಮಾಡಲು ಸಾಧ್ಯ. ಪದ್ಮರಾಜ್ ಅವರಿಗೂ ಒಂದು ಅವಕಾಶ ಕೊಟ್ಟು ನೋಡಿ, ಈ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾದರಿಯಾಗಿ ಮಾಡಿ ತೋರಿಸಲಿದ್ದಾರೆ ಎಂದರು.ನೋಟರಿ ವಕೀಲರಾದ ನಿರ್ಮಲ್ ಕುಮಾರ್ ಜೈನ್ ಮಾತನಾಡಿ, ವಕೀಲರ ಧ್ವನಿಯಾಗಿ ಪದ್ಮರಾಜ್ ಆರ್. ಪೂಜಾರಿ ಅವರು ಸಂಸತ್ತಿನಲ್ಲಿ ಕೆಲಸ ಮಾಡಲಿ ಎಂದು ಶುಭಹಾರೈಸಿದರು.







ಶಾಸಕ ಅಶೋಕ್ ಕುಮಾರ್ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮಧ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ನಗರ ಕಾಂಗ್ರೆಸ್ ಅಧ್ಯಕ್ ಮಹಮ್ಮದಾಲಿ, ಎಂ.ಪಿ. ಅಬೂಬಕ್ಕರ್, ದುರ್ಗಾ ಪ್ರಸಾದ್ ರೈ ಕುಂಬ್ರ, ಬೆಟ್ಟ ಈಶ್ವರ ಭಟ್, ಮನೋಹರ್ ಎ., ಎಂ.ಎಸ್.ಮಹಮ್ಮದ್, ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಪದ್ಮನಾಭ ಪೂಜಾರಿ,ನಝೀರ್ ಬೆದ್ರೋಡಿ, ಪ್ರಸಾದ್ ಕೌಶಲ್ ಶೆಟ್ಟಿ, ಜೋಕಿಂ ಡಿಸೋಜಾ,

ವೇದಿಕೆಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ ರೈ, ಡಾ ರಾಜಾರಾಂ, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎಂ ಎಸ್ ಮಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಪುಡಾ ಅಧ್ಯಕ್ಷ ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ವಕೀಲರುಗಳಾದ ಬೆಟ್ಟ ಈಶ್ವರಭಟ್, ಎಂ ಪಿ ಅಬೂಬಕ್ಕರ್, ನಿರ್ಮಲ್ ಕುಮಾರ್ ಜೈನ್,ಮನೋಹರ್ , ಸಭೆಯಲ್ಲಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಿದ್ದಿಕ್ ಕೆ‌ಎಂ, ಪದ್ಮನಾಭ ಪೂಜಾರಿ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಕುಂಬ್ರ ದುರ್ಗಾಪ್ರಸಾದ್ ರೈ, ಪ್ರಸಾದ್ ಕೌಶಲ್ ಶೆಟ್ಟಿ, ಜೋಕಿಂ ಡಿಸೋಜಾ,ಮೌರಿಶ್ ಮಸ್ಕರೇನಸ್, ವಕೀಲರಾದ ರಮ್ಲತ್, ಅಶೋಕ್ ಪೂಜಾರಿ ಸಂಪ್ಯ, ಮೊದಲಾದವರು ಉಪಸ್ಥಿತರಿದ್ದರು.
ಭಾಸ್ಕರ್ ಕೋಡಿಂಬಾಳ ಸ್ವಾಗತಿಸಿದರು. ಶಾಕಿರ್ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement