Published
8 months agoon
By
Akkare Newsಬೆಂಗಳೂರು : ಲೋಕಸಭಾ ಚುನಾವಣೆ ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಯನ್ನು ನಿಷೇಧಿಸಿ ಚುನಾವಣಾ ಆಯೋಗವು ಖಡಕ್ ಆದೇಶ ಹೊರಡಿಸಿದೆ.
ಈ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದಂತ ಸೂರಳ್ ಕರ್ ವಿಕಾರ್ ಕಿಶೋರ್ ಅವರು ಎಲ್ಲಾ ಮಾಧ್ಯಮಗಳ ಸಂಪಾದಕರು, ವರದಿಗಾರರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.
ಮೇಲಿನ ಕಲಂನಲ್ಲಿ ಭಾರತ ಚುನಾವಣಾ ಆಯೋಗಕ್ಕೆ ಪ್ರದತ್ತವಾಗಿರುವ ಅಧಿಕಾರಧನ್ವಯ ಭಾರತ ಚುನಾವಣಾ ಆಯೋಗವು ಉಲ್ಲೇಖ (1)ರಂತೆ ಅಧಿಸೂಚನೆ ಹೊರಡಿಸಿರುತ್ತದೆ. ಅದರಂತೆ ಲೋಕಸಭೆಗೆ ನಡೆಯುತ್ತಿರುವ 2024ರ ಸಾರ್ವತ್ರಿಕ ಚುನಾವಣೆಯ ಸಂಬಂಧ ದಿನಾಂಕ: 19-04-2024ರ ಬೆಳಿಗ್ಗೆ 7 ಗಂಟೆ ಮತ್ತು ದಿನಾಂಕ: 01-06-2024ರ ಸಂಜೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೇ ಮಾಧ್ಯಮದಲ್ಲಿ ಮತದಾನಕ್ಕೆ ಸಂಬಂಧಪಟ್ಟ ಅಭಿಪ್ರಾಯದ ಸಮೀಕ್ಷೆಗಳು ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಮೀಕ್ಷೆಯ ಫಲಿತಾಂಶವನ್ನು ಪ್ರಸಾರ ಮಾಡಲು ನಿರ್ಭಂಧವಿರುತ್ತದೆ.
ಈ ಸಂಬಂಧ ಭಾರತ ಚುನಾವಣಾ ಆಯೋಗದ ಆದೇಶದ ಪ್ರತಿಯನ್ನು ಮತ್ತು ಸದರಿ ಆದೇಶವನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ರಾಜ್ಯ ಪತ್ರದ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿಲಾಗಿದೆ. ಸದರಿ ಆದೇಶದಂತೆ ತಾವು ಅಗತ್ಯ ಕ್ರಮ ವಹಿಸುವಂತೆ ಕೋರಿದ್ದಾರೆ.