ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ರಾಜಕೀಯ ಸಂಘ-ಸಂಸ್ಥೆಗಳು ಸಾಮಾನ್ಯ ಸ್ಥಳೀಯ
ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಂದ ಸತ್ಯಜಿತ್ ಸುರತ್ಕಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಹಿಂದೂ ಮುಖಂಡ ಮತ್ತು ಎಸ್ ಡಿ ಪಿ ಐ ಬೆಂಬಲಿಗ ಎನ್ನುವ ಸಂದೇಶ ರವಾನೆ : ಹಿಂದೂ ಮುಖಂಡ ರಾಜಾರಾಮ್ ಭಟ್ ಖಂಡನೆPublished
12 months agoon
By
Akkare Newsಪುತ್ತೂರು: ದಕ್ಷಿಣ ಕನ್ನಡ ಲೊಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ರವರು ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ತಮ್ಮದೇ ಬಿಲ್ಲವ ಜಾತಿಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರವರಿಗೆ ಚುನಾವಣೆಯಲ್ಲಿ ಬಹಿರಂಗವಾಗಿ ತಮ್ಮ ಬೆಂಬಲವನ್ನು ಘೋಷಿಸಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಸತ್ಯಜಿತ್ ಸುರತ್ಕಲ್ ಒಬ್ಬ ನಕಲಿ ಹಿಂದೂ ನಾಯಕ, ಜಾತಿವಾದಿ, ಎಸ್.ಡಿ. ಪಿ.ಐ ಬೆಂಬಲಿಗ, ನಕಲಿ ಹಿಂದೂ ಎಂಬ ಪೋಸ್ಟ್ ವೈರಲ್ ಮಾಡಿ ಅವರ ತೇಜೋವಧೆ ಮಾಡುತ್ತಿದ್ದು ಇದನ್ನು ಪುತ್ತೂರಿನ ಹಿಂದೂ ಮುಖಂಡರಾದ ರಾಜಾರಾಮ್ ಭಟ್ ತೀವ್ರವಾಗಿ ಖಂಡಿಸಿದ್ದಾರೆ.
ಸತ್ಯಜಿತ್ ಸುರತ್ಕಲ್ ಈ ಹಿಂದೆ ಹಿಂದೂತ್ವಕಾಗಿ, ಸಂಘಟನೆಗಾಗಿ ಹಲವಾರು ಕೇಸ್ ಗಳನ್ನು ತಮ್ಮ ಮೇಲೆ ಹಾಕಿಕೊಂಡಿದ್ದವರು , ಎಷ್ಟೋ ಹಿಂದೂ ಯುವಕರನ್ನು ಕೇಸು ಗಳಾದಾಗ ಪೋಲಿಸ್ ಠಾಣೆಯಿಂದ ಬಿಡಿಸಿಕೊಂಡು ಬಂದವರು ಇಂತವರ ಬಗ್ಗೆ ಚುನಾವಣಾ ಪ್ರಚಾರದ ವಿಷಯದಲ್ಲಿ ಅವರನ್ನು ಗುರಿಯಾಗಿಸಿ ತೇಜೋವಧೆ ಮಾಡುತ್ತಿರುವುದು ಖಂಡನೀಯ.
ಅಲ್ಲದೆ ಬಿಜೆಪಿ ಪಕ್ಷ ತೊರೆದು ಹೋದ ಅದೆಷ್ಟೋ ಹಿರಿಯ ನಾಯಕರು ,ಪ್ರಧಾನಿ ಮೋದಿಯನ್ನು ಕೂಡ ಜರಿದ ನಾಯಕರಿಗೆ ಮತ್ತೆ ಸ್ವಾಗತ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ನಡೆಯುತ್ತಿರುವಾಗ ಈ ತರಹದ ಕೀಳುಮಟ್ಟದ ರಾಜಕೀಯ ಮಾಡುತ್ತಿರುವ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಮಾಡುವ ಕೆಲಸ ಸರಿಯಲ್ಲ ಎಂದು ರಾಜಾರಾಮ್ ಭಟ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.