Published
12 months agoon
By
Akkare Newsಮಂಗಳೂರು: ಲೋಕಸಭೆ ಚುನಾವಣೆಯ ಕೊನೆ ದಿನವಾದ ಬುಧವಾರ ಮಂಗಳೂರಿನ ಪಂಪ್’ವೆಲ್’ನಿಂದ ಕಣ್ಣೂರುವರೆಗೆ ರೋಡ್ ಶೋ ಜರಗಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಸದಸ್ಯ ಐವನ್ ಡಿಸೋಜಾ, ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್, ಕೇಶವ ಮರೋಳಿ, ನವೀನ್ ಡಿಸೋಜಾ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ದಾಸ್, ಪ್ರಮುಖರಾದ ಯು.ಟಿ. ಫರ್ಜಾನ್, ರವಿರಾಜ್ ಪೂಜಾರಿ, ರಮಾನಂದ್ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಗರೋಡಿ, ದರ್ಗಾ ಭೇಟಿ:
ರೋಡ್ ಶೋ ನಡುವೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ, ಅಡ್ಯಾರ್ ಕಣ್ಣೂರು ಶೇಖ್ ಯೂಸುಫ್ ಸಿದ್ದೀಕ್ ದರ್ಗಾ ಶರೀಫ್’ಗೆ ಭೇಟಿ ನೀಡಿದರು.