Published
12 months agoon
By
Akkare Newsಸುಬ್ರಹ್ಮಣ್ಯ: ಬಿಜೆಪಿ ನಾಯಕ ಕರುಣಾಕರ ಅಡ್ಪಂಗಾಯ ಮತ್ತು ಅಜ್ಜಾವರ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬೀನಾ ಕರುಣಾಕರ ಅಡ್ಪಂಗಾಯ ಸೇರಿದಂತೆ ಜೆಡಿಎಸ್ ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಈ ಹಿಂದೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ, ಜಾಲ್ಸೂರು ಶಕ್ತಿ ಕೇಂದ್ರದ ಅಧ್ಯಕ್ಷ, ಸಿಎ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಕರುಣಾಕರ ಅಡ್ಪಂಗಾಯ ಮತ್ತು ಅಜ್ಜಾವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬೀನಾ ಕರುಣಾಕರ ಅವರನ್ನು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಉಸ್ತುವಾರಿ ಸಚಿವರು ಪಕ್ಷಕ್ಕಕೆ ಸೇರ್ಪಡೆ ಮಾಡಿದರು.
ಸುಳ್ಯ ಸಿಎ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಕರುಣಾಕರ ಅಡ್ಪಂಗಾಯ ಅವರು ಸಹಕಾರ ಸಂಘ ಸ್ಥಾಪಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಸಹಕಾರ ಭಾರತಿ ವಿರುದ್ಧ ಸ್ಪರ್ಧಿಸಿದ್ದರು. ಆ ಬಳಿಕ ಕರುಣಾಕರ ಅಡ್ಪಂಗಾಯ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಇದೀಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ನೇತೃತ್ವ ವಹಿಸಿ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ.
ಜೆ.ಡಿ.ಎಸ್ ನಾಯಕರು ಕಾಂಗ್ರೆಸ್‍ಗೆ: ತಾ.ಪಂ. ನಿಕಟ ಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರ ನೇತೃತ್ವದಲ್ಲಿ ಕಡಬ ತಾಲೂಕು ಜೆ.ಡಿ.ಎಸ್ ಗೌರವಾಧ್ಯಕ್ಷ ಎಂ.ಪಿ ದಿನೇಶ್ ಮಾಸ್ತರ್, ವಲಯ ಅಧ್ಯಕ್ಷ, ಗ್ರಾ. ಪಂ. ಮಾಜಿ ಸದಸ್ಯ ಕಿಶೋರ್ ಅರಂಪಾಡಿ, ತಾಲೂಕು ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಚನ್ನಕಜೆ, ಉದ್ಯಮಿ ಶಿವರಾಮ, ಅಕ್ಷಯ್, ಉಪೇಂದ್ರ ಅವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು