Published
8 months agoon
By
Akkare Newsಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಪೂಜಾರಿಯವರನ್ನು ಕಣಕ್ಕೆ ಇಳಿಸಿದ್ದೇವೆ. ಅವರಿಗೆ ನಿಮ್ಮೆಲ್ಲಾ ಅಮೂಲ್ಯವಾದ ಮತವನ್ನು ನೀಡಿ ಅವರನ್ನು ಗೆಲ್ಲಿಸಬೇಕಾಗಿ ನಾನು ನಿಮ್ಮಲ್ಲಿ ಕೈ ಜೋಡಿಸಿ ಮನವಿ ಮಾಡುತ್ತಿದ್ದೇನೆ ಎಂದು ಕರವಾಳಿ ಕರ್ನಾಟಕದ ಬಿಲ್ಲವ ಸಮಾಜದ ಪ್ರಭಾವಿ ನಾಯಕ ಮಾಜಿ ಸಚಿವ ಬಿ ಜನಾರ್ಧನ ಪೂಜಾರಿ ಹೇಳಿದ್ದಾರೆ.
ಮಾದ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ವಿಶೇಷವಾಗಿ ಬಿಲ್ಲವ ಸಮಾಜದವರನ್ನು ಉದ್ದೇಶಿಸಿ ಮಾತನಾಡಿದ ಬಿ ಜನಾರ್ಧನ ಪೂಜಾರಿ ಯವರು” ಬಿಲ್ಲವ ಸಮಾಜ ರಾಜಕೀಯವಾಗಿ, ಸಾಮಾಜಿಕವಾಗಿ ಶೋಷಣೆಗೆ ಒಳಗಾಗುತ್ತಾ ಬಂದಿದೆ. ಅದರಲ್ಲೂ ಬಿಜೆಪಿ ಪಕ್ಷ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಬದಲು, ನಮ್ಮ ಸಮುದಾಯದ ಕೆಲವು ಅಮಾಯಕ ಹುಡುಗರು ಅವರಿಗೆ ಬೇಕಾಗಿದೆ. ಅವರ ಮೇಲೆ ಕೇಸು ಹಾಕಲು, ಜೈಲು ಪಾಲಾಗಲು ಬಿಜೆಪಿ ಕಾರಣವಾಗಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಹುಡುಗರನ್ನು ಭಾವನಾತ್ಮಕವಾಗಿ ಬಂಧಿಸಿರುವ ಬಿಜೆಪಿ ಪಕ್ಷ ಯಾವ ಅಭಿವೃದ್ಧಿ ಕಾರ್ಯವನ್ನು ಸಹ ಮಾಡಿಲ್ಲ. ಯಾವ ಸಮುದಾಯವನ್ನು ಮೇಲಕ್ಕೇರಲು ಬಿಟ್ಟಿಲ್ಲ. ಆದುದರಿಂದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವೆಲ್ಲಾ ನಮ್ಮ ಗರಡಿಯಲ್ಲಿ ಬೆಳೆದ ಪದ್ಮರಾಜ್ ಪೂಜಾರಿ ಎಂಬ ನಿಶ್ವಾರ್ಥ ಸಮಾಜ ಸೇವಕನಿಗೆ ಮತ ನೀಡಿ ನಿಮ್ಮ ಸೇವೆ ಮಾಡುವ ಅವಕಾಶವನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.