ಇಂದಿನ ಕಾರ್ಯಕ್ರಮ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚಿಣ್ಣರ ಲೋಕ ಜೀವನಶೈಲಿ ಪ್ರತಿಭಾ ಪುರಸ್ಕಾರ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಎ.ವಿ.ಜಿ. ಬೇಸಿಗೆ ಶಿಬಿರ 2024 ಸಮಾರೋಪ ಸಮಾರಂಭ "ಮಕ್ಕಳ ರಾಜ್ಯ" ನಾಟಕ ಪ್ರದರ್ಶನ ಎವಿಜಿ ವಿದ್ಯಾಸಂಸ್ಥೆ ಪುತ್ತೂರಿನ ಕೆವಿಜಿ ಆಗಬೇಕು : ಜಯಪ್ರಕಾಶ್ ಬದಿನಾರ್Published
1 year agoon
By
Akkare Newsಪುತ್ತೂರು: ಏ.22 ರಿಂದ 27ರ ತನಕ ನಡೆದ ಎವಿಜಿ ಬೇಸಿಗೆ ಶಿಬಿರ -2024 ಸಮಾರೋಪ ಸಮಾರಂಭದೊಂದಿಗೆ ಇಂದು ಸಂಪನ್ನಗೊಂಡಿತು.
ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಸಮಾರೋಪ ಭಾಷಣ ಮಾಡಿ ಶಿಬಿರದ ವೈಶಿಷ್ಟ್ಯತೆಗಳನ್ನು ಕೊಂಡಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಯಪ್ರಕಾಶ್ ಬದಿನಾರ್ ರವರು, ಪುತ್ತೂರುರಿನ ಎವಿಜಿ ವಿದ್ಯಾಸಂಸ್ಥೆಯು ಸುಳ್ಯದ ಕೆವಿಜಿ ಸಂಸ್ಥೆಯ ಅಗೆಯೇ. ವಿದ್ಯಾ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಲಿ,ಅದೇ ರೀತಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ವಿದ್ಯಾಸಂಸ್ಥೆಯ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಮತ್ತೋರ್ವ ಮುಖ್ಯ ಅತಿಥಿ, ಐ.ಆರ್ ಸಿ.ಎಂ.ಡಿ. ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲಾ ಗಣೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕಲಾವಿದ ಅಶೋಕ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು.