ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಲಾಖಾ ಮಾಹಿತಿ

ಕರಾವಳಿಯಲ್ಲಿ ಎ.30 ರವರೆಗೆ ಬಿಸಿಗಾಳಿ ಅಲೆ, ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದ ಹವಾಮಾನ ಇಲಾಖೆ..!

Published

on

ಮಂಗಳೂರು: ಕರಾವಳಿಯಲ್ಲಿ ಎ.30ರವರೆಗೆ ಬಿಸಿಗಾಳಿ ಅಲೆ ಬೀಸಲಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.ಕರಾವಳಿಯಲ್ಲಿ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಈ ವಿದ್ಯಮಾನ ನಡೆಯುತ್ತಿದ್ದು, ಎ.30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಬಿಸಿಲಿನಲ್ಲಿ ಹೆಚ್ಚು ಕಾಲ ಕಳೆಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು ಸುಡು ಬಿಸಿಲಿನಲ್ಲಿ ಆಗಾಗ ನೆರಳಿನಡಿ ಆಶ್ರಯ, ನಿಮ್ಮ ಆರೋಗ್ಯಕ್ಕೆ ಅಭಯ ಪಡೆಯಿರಿ.

ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಿಂದ, ದೈಹಿಕ ಒತ್ತಡ ಮತ್ತು ದಣಿವಾಗಿ ಆರೋಗ್ಯಕ್ಕೆ ಮಾರಕವಾಗಬಹುದು ಬಿರು ಬಿಸಿಲಿನಲ್ಲಿ ನಿಮ್ಮ ಕೆಲಸಗಳಿಗೆ ವಿರಾಮ ನೀಡಿ, ನಿಮ್ಮ ಆರೋಗ್ಯ ರಕ್ಷಿಸಿ. ಬಿರು ಬಿಸಿಲಿನಲ್ಲಿ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು ಸೂರ್ಯನ ಶಾಖಕ್ಕೆ ಛತ್ರಿ ಉಪಯೋಗಿಸಿ.








ಬೇಸಿಗೆಯಲ್ಲಿ ಮನೆ ವಾತಾವರಣ ತಂಪಾಗಿರಿಸಿ, ಕುಟುಂಬದ ಆರೋಗ್ಯ ರಕ್ಷಿಸಿ. ಸೂರ್ಯನ ಶಾಖ, ಬಳಲಿಕೆ, ಬೆವರು ಮತ್ತು ದುರ್ಬಲ ನಾಡಿಗೆ ಕಾರಣವಾಗಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು. ತಿಳಿ ಬಣ್ಣದ ಸಡಿಲವಾದ ಬಟ್ಟೆ ಧರಿಸಿ, ನಿಮ್ಮ ದೇಹಕ್ಕೆ ತಗಲುವ ಶಾಖ ಕಡಿತಗೊಳಿಸಿ. ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು ಇಂತಹ ಬಿಸಿಲಿನ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಉರಿ ಬಿಸಿಲು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು ಎಚ್ಚರಿಕೆ ನೀಡಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement