Published
8 months agoon
By
Akkare Newsಕಡಬ:ಪಂಜ ಮೀಸಲು ಮೀಸಲು ಅರಣ್ಯ ವ್ಯಾಪ್ತಿಯ ಬಲ್ಯ ಸಮೀಪದ ಕುಂತೂರು ಪದವಿನಲ್ಲಿ ಬೆಂಕಿ ಕೆನ್ನಾಲೆಗೆ ಹಸಿರು ಪರಿಸರ ಹೊತ್ತಿ ಉರಿದಿದೆ.
ಈ ಘಟನೆ ಎ.28 ರಂದು ಸಾಯಂಕಾಲ 3 ರ ಸುಮಾರಿಗೆ ನಡೆದಿದ್ದು ಆಕಸ್ಮಿಕ ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.ರಸ್ತೆ ಬದಿಯ ಸಸ್ಯ ಸಂಕುಲ ಸುಟ್ಟು ಕರಕಲಾಗಿದೆ.
ಸ್ಥಳೀಯರು ಹಾಗೂ ವಾಹನ ಸವಾರರು ಬೆಂಕಿ ಕೆನ್ನಾಲೆಗೆ ಬೆಚ್ಚಿ ಬಿದ್ದಿದ್ದು ನಂದಿಸಲು ಪ್ರಯತ್ನಿಸಿದರೂ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಅಗ್ನಿ ಶಾಮಕ ದಳದ ವಾಹನ ಬರುವ ಹೊತ್ತಿಗೆ ಭಾಗಶಃ ಹಸಿರು ಕಾನನ ಹೊತ್ತಿ ಉರಿದಿದ್ದು ಅದನ್ನು ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಂದಿಸಿ ನಿಯಂತ್ರಣಕ್ಕೆ ತಂದರು.
ಈ ಬಗ್ಗೆ ಮಾಹಿತಿ ಪಡೆಯಲು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದರೂ ಸಕಾಲಕ್ಕೆ ಕರೆಗೆ ಲಭ್ಯವಾಗಿಲ್ಲ,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.