Published
8 months agoon
By
Akkare Newsಪುತ್ತೂರು: ನಿಮ್ಮನ್ನು ನಾವು ಗಮನಿಸಿದ್ದೇವೆ, ನಿಮ್ಮ ಚುನಾವಣಾ ಪ್ರಚಾರ ಶೈಲಿ ಅತ್ಯುತ್ತಮವಾಗಿದೆ, ಇದೇ ಕಾರಣಕ್ಕೆ ನಿಮ್ಮನ್ನು ನಾವೇ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ , ಕರ್ನಾಟಕದ ಉಸ್ತುವಾರಿಯೂ ಅಗಿರುವ ರಣಜೀತ್ ಸಿಂಗ್ ಸುಜೇವಾಲರು ಶಾಸಕರಾದ ಅಶೋಕ್ ರೈವರಿಗೆ ಕರೆ ಮಾಡಿದ ಹೇಳಿದ ವಿಚಾರ.
ಲೋಕಸಭಾ ಚುನಾವಣೆಗೆ ಎರಡು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಸುರ್ಜೇವಾಲರವರು ಶಾಸಕರನ್ನು ತಬ್ಬಿಕೊಂಡು ನೀವು ಕರಾವಳಿಯ ಸಿಂಹ ಎಂದು ಹಾಡಿಹೊಗಳಿದ್ದರು.ಯಾವ ಉದ್ದೇಶದಿಂದ ಈ ರೀತಿ ಹೇಳಿದ್ದಾರೆ ಎಂಬುದು ಗೊತ್ತಾಗಿಲ್ಲ ಆದರೆ ಇವರ ಹೇಳಿಕೆ ಅತ್ಯಂತ ಮಹತ್ವವಾಗಿರುವುದರಿಂದ ರಾಜಕೀಯ ವಲಯದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು.
ಇದೀಗ ಎ. ೨೯ ರಂದು ಮಧ್ಯಾಹ್ನ ಶಾಸಕರ ಮೊಬೈಲ್ಗೆ ಕರೆ ಮಡಿದ ಸುರ್ಜೆವಾಲರವರು ನೀವು ವಿಧಾನಸಭಾ ಚುನಾವಣೆ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಕೈಗೊಂಡ ಕ್ರಮಗಳು ಮತ್ತು ಸರಕಾರದ ಯೋಜನೆಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸಿದ ಪರಿ ಅದ್ಬುತವಾಗಿತ್ತು. ಕಾರ್ಯಕರ್ತರ ಜೊತೆಗಿನ ಒಡನಾಟ ಮತ್ತು ಪಕ್ಷದ ಬಲ ವೃದ್ದಿಸುವಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡೊಯ್ಯುವ ಶೈಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಇಷ್ಟವಾಗಿದೆ ಎಂದು ಹೇಳಿದ್ದು ಬೈಂದೂರು ಕ್ಷೇತ್ರದಲ್ಲಿ ತಾವು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ವಿನಂತಿಸಿದ್ದಾರೆ.
ಶಾಸಕರ ಜೊತೆ ಸುಜೇವಾಲ ನಿಕಟ ಸಂಪರ್ಕ
ಶಾಸಕರಾದ ಅಶೋಕ್ ರೈ ಜೊತೆ ಸುರ್ಜೆವಾಲರವರು ಕಳೆದ ಕೆಲವು ತಿಂಗಳಿನಿಂದ ನಿಕಟ ಸಂಪರ್ಕವನ್ನು ಹೊಂದಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಸುರ್ಜೆವಾಲರ ಹೇಳಿಕೆಗೆ ಪಕ್ಷದಲ್ಲಿ ಹೆಚ್ಚಿನ ಮಹತ್ವವೂ ಇದೆ. ಕರ್ನಾಟಕದ ಉಸ್ತುವಾರಿಯೂ ಆಗಿರುವ ಅವರು ಒಬ್ಬ ಶಾಸಕನಲ್ಲಿ ನಿರಂತರ ಸಂಪರ್ಕ ಇಟ್ಟುಕೊಂಡಿರುವುದು ಸಂಚಲನಕ್ಕೆ ಕಾರಣವಾಗಿದೆ. ಶಾಸಕರ ಕಾರ್ಯವೈಖರಿಯ ಬಗ್ಗೆ ಪಕ್ಷ ಗಮನಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಶಾಸಕರಿಗೆ ಉನ್ನತ ಸ್ಥಾನ ದೊರೆಯುವ ಮುನ್ಸೂಚನೆಯೂ ಆಗಿರಬಹುದು ಎಂಬುದು ರಾಜಕೀಯ ಲೆಕ್ಕಾಚಾರ.