ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಮೇ.2 : ಪೆರ್ಲೋಡಿ ಶ್ರೀ ಶೀನಪ್ಪ ಗೌಡ ತರವಾಡು ಮನೆಯಲ್ಲಿ ನಾಗಪ್ರತಿಷ್ಠೆ ಮತ್ತು ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮ

Published

on

ಪೆರ್ಲೋಡಿ ತರವಾಡು ಮನೆ ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಮೇಷ ಮಾಸ ೧೯ ಸಲುವ ದಿನಾಂಕ 02-05-2024ನೇ ಗುರುವಾರ ಬೆಳಿಗ್ಗೆ ಗಂಟೆ 10.14ರ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ನಾಗಪ್ರತಿಷ್ಠೆ ಮತ್ತು ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮಗಳು ನಡೆಯಲಿದೆ







ಕಾರ್ಯಕ್ರಮಗಳ ವಿವರ.
ದಿನಾಂಕ : 01-05-2024ನೇ ಬುಧವಾರ
ಸಂಜೆ ಗಂಟೆ 6.00ರಿಂದ : ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ
ರಾತ್ರಿ ಗಂಟೆ 9.00ಕ್ಕೆ : ಅನ್ನಸಂತರ್ಪಣೆ
ದಿನಾಂಕ : 02-05-2024ನೇ ಗುರುವಾರ
ಪೂರ್ವಾಹ್ನ ಗಂಟೆ 7.00ರಿಂದ : ಗಣಪತಿ ಹೋಮ, ನಾಗಪ್ರತಿಷ್ಠೆ,ಬ್ರಹ್ಮಕಲಶ ಪೂಜೆ
ಬೆಳಿಗ್ಗೆ ಗಂಟೆ 10.14ರ ಮಿಥುನ ಲಗ್ನದ ಸುಮೂಹೂರ್ತದಲ್ಲಿ : ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ,ಎಂದು ಶ್ರೀ ಶೀನಪ್ಪ ಗೌಡ ಹಾಗೂ ಕುಟುಂಬಸ್ಥರು ಪೆರ್ಲೋಡಿ ತರವಾಡು ಮನೆ ಯವರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement