Published
11 months agoon
By
Akkare Newsಹೂ ಬೆಳೆಯುವ ಘಟ್ಟ ಪ್ರದೇಶಗಳಲ್ಲಿ ಈ ಬಾರಿ ನೀರಿನ ಕೊರತೆಯ ಕಾರಣಕ್ಕೆ ಹೂವಿನ ಫಸಲು ಗಣನೀಯ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ಎಲ್ಲೆಡೆ ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ಏರಿಕೆಯಾಗಿದೆ.ಬೆಲೆ ಏರಿಕೆಯ ಪರಿಣಾಮ ಜನ ಹೂವು ಖರೀದಿ ಪ್ರಮಾಣವನ್ನೂ ಕಡಿಮೆ ಮಾಡಿದ್ದು, ಹೀಗಾಗಿ ಬೇಡಿಕೆಯೂ ಕುಸಿತ ಕಂಡಿದೆ.
ಹೂವಿನ ವ್ಯಾಪಾರಿಗಳ ಮಾಹಿತಿಯ ಪ್ರಕಾರ ಕರಾವಳಿ ಭಾಗಕ್ಕೆ ಸೇವಂತಿಗೆಯು ಕುಣಿಗಲ್, ಚಿಕ್ಕಬಳ್ಳಾಪುರ, ಹೊಸಕೋಟೆ ಮೊದಲಾದ ಭಾಗಗಳಿಂದ ಆಗಮಿಸುತ್ತಿದ್ದು, ಗೊಂಡೆ ಹೂಗಳು ಕೋಲಾರದಿಂದ ಮೈಸೂರಿಗೆ ಬಂದು ಅಲ್ಲಿಂದ ಕರಾವಳಿಗೆ ಆಗಮಿಸುತ್ತದೆ. ಈ ಭಾಗಗಳಲ್ಲಿ ನೀರಿನ ಕೊರತೆಯ ಕಾರಣಕ್ಕೆ ಸಾಕಷ್ಟು ಬೆಳೆಗಾರರು ಹೂವು ಬೆಳೆಯುವುದನ್ನೇ ಕಡಿಮೆ ಮಾಡಿದ್ದು, ಒಂದಷ್ಟು ಮಂದಿ ಟ್ಯಾಂಕರ್ ನೀರು ಹಾಕಿ ಹೂವನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಧಾರಣೆ ಗಣನೀಯ ಏರಿಕೆ ಕಂಡಿದೆ.